ಶ್ರೀನಗರ : ಮೊದಲ ಬಾರಿ ನಡೆಯಲಿರುವ ಖೇಲೊ ಇಂಡಿಯಾ ಜಲ ಕ್ರೀಡಾ ಉತ್ಸವದ (ಕೆಐಡಬ್ಲ್ಯು ಎಸ್‌ಎಫ್) ಮ್ಯಾಸ್ಕಟ್ ಅನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಇಲ್ಲಿನ ಪ್ರಸಿದ್ಧ ದಲ್ ಸರೋವರದಲ್ಲಿ ಇದೇ 21 ರಿಂದ 23ರವರೆಗೆ ನಡೆಯಲಿರುವ ಈ ಕ್ರೀಡೆಗಳಲ್ಲಿ 400 ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
‘ಹಿಮಾಲಯನ್ ಕಿಂಗ್‌ಫಿಷರ್’ ಈ ಕೂಟದ ಮ್ಯಾಸ್ಕಟ್ ಆಗಿದೆ. ಅದರ ಕಿತ್ತಳೆ ಮತ್ತು ನೀಲಿ ಬಣ್ಣವು ಸಾಮರ್ಥ್ಯ ಮತ್ತು ಪ್ರಶಾಂತಚಿತ್ತವನ್ನು ಪ್ರತಿನಿಧಿಸುತ್ತದೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಕ್ರೀಡಾ ಕೌನ್ಸಿಲ್, ಈ ಉತ್ಸವವನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ನಡೆಸುತ್ತಿದೆ.
ಈ ಕೂಟದಲ್ಲಿ ಹುಟ್ಟುದೋಣಿ, ಹಾಯಿದೋಣಿ, ಕಯಾಕಿಂಗ್ ಸ್ಪರ್ಧೆಗಳಲ್ಲಿ ಪದಕಗಳನ್ನು ನೀಡಲಾಗುತ್ತದೆ. ವಾಟರ್ ಸ್ಕೀಯಿಂಗ್, ಶಿಕಾರ (ವಿಹಾರಕ್ಕೆ ಬಳಸುವ ದೋಣಿ) ರೇಸ್ , ಡ್ರ್ಯಾಗನ್ ಬೋಟ್ ಈ ಬಾರಿಯ ಪ್ರದರ್ಶನ ಕ್ರೀಡೆಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.