
ಲೇಹ್ (ಲಡಾಕ್): 2026ರ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟವು ಲಡಾಖ್‌ನ ಲೇಹ್‌ನಲ್ಲಿ ಮಂಗಳವಾರ ಆರಂಭವಾಗಲಿದ್ದು, ಒಂದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಾಕಣದಲ್ಲಿದ್ದಾರೆ.
ಇಲ್ಲಿನ ನವಾಂಗ್ ದೋರ್ಜನ್ ಸ್ಟೊಬ್ಡಾನ್ (ಎನ್‌ಡಿಎಸ್) ಕ್ರೀಡಾಂಗಣ, ಸೇನಾ ಮೈದಾನ ಮತ್ತು ಹೆಪ್ಪುಗಟ್ಟಿದ ಗುಪುಖ್ ಕೊಳವು ಕ್ರೀಡಾಕೂಟದ ಆಕರ್ಷಣೆಯ ಕೇಂದ್ರಗಳಾಗಿವೆ. ಇದೇ 26ರವರೆಗೆ ಕೂಟ ನಡೆಯಲಿದೆ.
ಮಂಜುಗಡ್ಡೆ ಮೇಲೆ ನಡೆಯುವ ಹಾಕಿ ಮತ್ತು ಸ್ಕೇಟಿಂಗ್ ಕ್ರೀಡೆಯಲ್ಲಿ 472 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ವರ್ಷದ ಆಕರ್ಷಣೆಯೆಂದರೆ ಒಲಿಂಪಿಕ್ ಕ್ರೀಡೆ ಫಿಗರ್ ಸ್ಕೇಟಿಂಗ್ ಅನ್ನು ಪರಿಚಯಿಸಲಾಗಿದೆ.
ಕಳೆದ ವರ್ಷವೂ ಇದೇ ತಾಣದಲ್ಲಿ ಕೂಟ ನಡೆದಿದ್ದು, ಆತಿಥೇಯ ತಂಡವು 13 ಚಿನ್ನದ ಪದಕಗಳಲ್ಲಿ ನಾಲ್ಕು ಅನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದರು. ತಮಿಳುನಾಡು ಮತ್ತು ಮಹಾರಾಷ್ಟ್ರ ತಂಡಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದ್ದವು.
ಈ ಕೂಟವು ಖೇಲೊ ಇಂಡಿಯಾ ಕ್ಯಾಲೆಂಡರ್‌ನ ಎರಡನೇ ಕಾರ್ಯಕ್ರಮವಾಗಿದೆ. ದಿಯುನಲ್ಲಿ ಈಚೆಗೆ ನಡೆದ ಬೀಚ್ ಗೇಮ್ಸ್ ಕ್ಯಾಲೆಂಡರ್‌ನ ಮೊದಲ ಕಾರ್ಯಕ್ರಮವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.