ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ಕೃಷ್ ಸುಕುಮಾರ್ ಮತ್ತು ಮಾನ್ವಿ ವರ್ಮಾ ಅವರು ಬಿಹಾರದ ಪಟ್ನಾದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.
ಕೂಟದ ಎರಡನೇ ದಿನವಾದ ಸೋಮವಾರ ಕರ್ನಾಟಕದ ಸ್ಪರ್ಧಿಗಳು ನಾಲ್ಕು ಚಿನ್ನ ಮತ್ತು ಐದು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಮಾನ್ವಿ ವರ್ಮಾ ಅವರು ಬಾಲಕಿಯರ 50 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲೂ ಚಿನ್ನಕ್ಕೆ ಮುತ್ತಿಕ್ಕಿದರು. 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಶ್ರೀಚರಣಿ ತುಮು ಚಾಂಪಿಯನ್ ಆದರು.
ಫಲಿತಾಂಶ: ಬಾಲಕರು: 100 ಮೀ. ಫ್ರೀಸ್ಟೈಲ್: ಕೃಷ್ ಕುಮಾರ್ (ಕರ್ನಾಟಕ, 1ನಿ.06.39ಸೆ)–1, ಸೂರ್ಯ ಜೋಯಪ್ಪ ಒ.ಆರ್. (ಕರ್ನಾಟಕ)–2, ಶುಭಂ ಜೋಶಿ (ಮಹಾರಾಷ್ಟ್ರ)–3. 200 ಮೀ. ಫ್ರೀಸ್ಟೈಲ್: ಅಭಿನವ್ (ಕೇರಳ, 1ನಿ.55.32ಸೆ)–1, ದಕ್ಷಣ್ ಎಸ್. (ಕರ್ನಾಟಕ, 1ನಿ.55.59ಸೆ)–2, ಸಂಪತ್ ಕುಮಾರ್ ಯಾದವ್ (ಆಂಧ್ರ ಪ್ರದೇಶ)–3. 50 ಮೀ. ಬಟರ್‌ಫ್ಲೈ: (ಜನಂಜಯ್ ಜ್ಯೋತಿ ಹಜಾರಿಕಾ, 25.98ಸೆ)–1, ಚಿಂತನ್ ಎಸ್. ಶೆಟ್ಟಿ (ಕರ್ನಾಟಕ, 25.26ಸೆ)–2, ವೇದಾಂತ್ ಸಂತೋಷ್ (ಮಹಾರಾಷ್ಟ್ರ)–3
ಬಾಲಕಿಯರು: 100 ಮೀ. ಫ್ರೀಸ್ಟೈಲ್: ಮಾನ್ವಿ ವರ್ಮಾ (ಕರ್ನಾಟಕ, 1ನಿ.18.30ಸೆ)–1, ಸಮೀರಾ ಮೆಹ್ರೋತ್ರಾ (ಮಹಾರಾಷ್ಟ್ರ)–2, ಸೋಮಶೇಖರ್ ಬಕ್ಸಿ (ಮಹಾರಾಷ್ಟ್ರ)–3. 50 ಮೀ. ಬಟರ್‌ಫ್ಲೈ: ಮಾನ್ವಿ ವರ್ಮಾ (ಕರ್ನಾಟಕ, 28.87ಸೆ)–1, ಚರಿತಾ ಫಣೀಂದ್ರನಾಥ್ (ಕರ್ನಾಟಕ, 29.21ಸೆ)–2, ರುತುಜಾ ಪ್ರಸಾದ್ (ಮಹಾರಾಷ್ಟ್ರ)–3. 800 ಮೀ. ಫ್ರೀಸ್ಟೈಲ್: ಶ್ರೀಚರಣಿ ತುಮು (ಕರ್ನಾಟಕ, 9ನಿ.22.29ಸೆ)–1, ಅದಿತಿ ಎನ್. ಮುಲೈ (ಕರ್ನಾಟಕ, 9ನಿ.25.51ಸೆ)–2, ಅದಿತಿ ಸತೀಶ್ ಹೆಗ್ಡೆ (ಮಹಾರಾಷ್ಟ್ರ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.