ADVERTISEMENT

ಸಿಂಧು, ಶ್ರೀಕಾಂತ್‌ಗೆ ಸೋಲು

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಆ್ಯನ್ ಸೆ ಯಂಗ್‌, ಜೊನಾಥನ್ ಕ್ರಿಸ್ಟಿ ಫೈನಲ್‌ಗೆ

ಏಜೆನ್ಸೀಸ್
Published 9 ಏಪ್ರಿಲ್ 2022, 13:03 IST
Last Updated 9 ಏಪ್ರಿಲ್ 2022, 13:03 IST
ಆ್ಯನ್ ಸೆ ಯಂಗ್ ಎದುರಿನ ಪಂದ್ಯದಲ್ಲಿ ಷಟಲ್ ರಿಟರ್ನ್ ಮಾಡಿದ ಪಿ.ವಿ ಸಿಂಧು –ಎಎಫ್‌ಪಿ ಚಿತ್ರ
ಆ್ಯನ್ ಸೆ ಯಂಗ್ ಎದುರಿನ ಪಂದ್ಯದಲ್ಲಿ ಷಟಲ್ ರಿಟರ್ನ್ ಮಾಡಿದ ಪಿ.ವಿ ಸಿಂಧು –ಎಎಫ್‌ಪಿ ಚಿತ್ರ   

ಸಂಚ್ಯಾನ್, ದಕ್ಷಿಣ ಕೊರಿಯಾ: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಸಿಂಧು, ಸ್ಥಳೀಯ ಆಟಗಾರ್ತಿ ಹಾಗೂ ಎರಡನೇ ಶ್ರೇಯಾಂಕದ ಆ್ಯನ್ ಸೆ ಯಂಗ್‌ ವಿರುದ್ಧ ಸೋರು. 20 ವರ್ಷದ ಆ್ಯನ್ ಸೆ ಯಂಗ್ 21-14, 21-17ರಲ್ಲಿ ಜಯ ಗಳಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಶ್ರೇಯಾಂಕ ರಹಿತ ಆಟಗಾರ್ತಿ ಪೊರ್ನಪವಿ ಚೊಚುವಾಂಗ್‌ ಅವರನ್ನು ಎದುರಿಸುವರು.

ಕೊರಿಯಾದ ಕಿಮ್ ಗಾ ಯೂನ್ ಎದುರು 21–17, 21–14ರಲ್ಲಿ ಗೆದ್ದ ಪೊರ್ನಪವಿ ಫೈನಲ್‌ ಪ್ರವೇಶಿಸಿದರು. ಕೊರಿಯಾ ಓಪನ್‌ನಲ್ಲಿ ಸ್ಥಳೀಯ ಆಟಗಾರ್ತಿಯೊಬ್ಬರು ಕೊನೆಯದಾಗಿ 2015ರಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಕೋವಿಡ್‌–19ರಿಂದಾಗಿ ಹಿಂದಿನ ಎರಡು ಆವೃತ್ತಿಗಳನ್ನು ರದ್ದು ಮಾಡಲಾಗಿತ್ತು.

ADVERTISEMENT

‍ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಸೋತರು. ಮೂರನೇ ಶ್ರೇಯಾಂಕದ ಜೊನಾಥನ್ ಐದನೇ ಶ್ರೇಯಾಂಕಿತ ಶ್ರೀಕಾಂತ್ ಅವರನ್ನು 21-19, 21-16ರಲ್ಲಿ ಮಣಿಸಿದರು. ಚೀನಾದ ವೆಂಗ್‌ ಹಾಂಗ್‌ ಯಾಂಗ್‌ ಅವರನ್ನು ಫೈನಲ್‌ನಲ್ಲಿ ಜೊನಾಥನ್ ಎದುರಿಸುವರು. ವೆಂಗ್‌ ಹಾಂಗ್ ಡೆನ್ಮಾರ್ಕ್‌ನ ವಿಕ್ಟರ್ ಸ್ವೆಂಡ್ಸೆನ್ ಎದುರು 22-20, 21-13ರಲ್ಲಿ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.