ADVERTISEMENT

ಸ್ನೂಕರ್‌: ಕೆಎಸ್‌ಬಿಎ ’ಎ‘ ತಂಡ ಜಯಭೇರಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:43 IST
Last Updated 15 ನವೆಂಬರ್ 2021, 16:43 IST
ಸ್ನೂಕರ್‌
ಸ್ನೂಕರ್‌   

ಬೆಂಗಳೂರು: ಕೆಎಸ್‌ಬಿಎ ’ಎ‘ ತಂಡ ಇಲ್ಲಿ ನಡೆಯುತ್ತಿರುವ ಎಂ.ಚೆನ್ನಿಯಪ್ಪನ್ ಸ್ಮಾರಕ ಅಂತರ ಕ್ಲಬ್ ಸ್ನೂಕರ್ ಟೂರ್ನಿಯಲ್ಲಿ ಸೋಮವಾರ ಅಮೋಘ ಜಯ ಸಾಧಿಸಿತು.

ದಿನದ ಎರಡು ಲೀಗ್ ಪಂದ್ಯಗಳಲ್ಲಿ ತಂಡ ಸದಾಶಿವನಗರ ಕ್ಲಬ್ ಮತ್ತು ಎಚ್‌ಬಿಸಿಸಿ ’ಬಿ‘ಯನ್ನು ಮಣಿಸಿತು. ಸದಾಶಿವನಗರ ಕ್ಲಬ್ ಮಿಶ್ರ ಫಲ ಕಂಡಿತು.

’ಎ‘ ಗುಂಪಿನ ಹಣಾಹಣಿಯಲ್ಲಿ ಕೆಎಸ್‌ಬಿಎ ’ಎ‘ ತಂಡ ಸದಾಶಿವನಗರ ಕ್ಲಬ್‌ ವಿರುದ್ಧ 2–0ಯಿಂದ ಜಯಿಸಿತು. ಎಚ್.ಇ. ಆನಂದ್‌ 38-52, 50-47, 50-34ರಲ್ಲಿ ವಿಜಯ್ ಗೌಡ ವಿರುದ್ಧ, ನವೀನ್ ಕುಮಾರ್ 47-08, 38-43, 44-43ರಲ್ಲಿ ಉದಯ್ ದೇವ್ ಎದುರು ಗೆದ್ದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಕೆಎಸ್‌ಬಿಎ ’ಎ‘ ತಂಡ ಎಚ್‌ಬಿಸಿಸಿಯನ್ನು 2–0ಯಿಂದ ಸೋಲಿಸಿತು. ನವೀನ್ ಕುಮಾರ್ 62-26, 41-37ರಲ್ಲಿ ಡೆನಿ ಜೇಮ್ಸ್ ವಿರುದ್ಧ ಮತ್ತು ದೀಪಕ್ ಎ63-53, 28-67, 72-40ರಲ್ಲಿ ರಾಜಾ ಎಸ್ ವಿರುದ್ಧ ಜಯ ಸಾಧಿಸಿದರು.

ಎಂಆರ್‌ಎಲ್‌ಎಫ್ ಎದುರಿನ ಪಂದ್ಯದಲ್ಲಿ ಸದಾಶಿವನಗರ ಕ್ಲಬ್ 2–0ಯಿಂದ ಗೆಲುವು ಸಾಧಿಸಿತು. ಸಂತೋಷ್ 55-37, 33-47, 38-14ರಲ್ಲಿ ಮಧುಸೂದನ್ ವಿರುದ್ಧ, ವಿಜಯ್ ಗೌಡ40-10, 24-39, 54-22ರಲ್ಲಿ ಹರೀಶ್ ವಿದುದ್ಧ ಗೆದ್ದರು.

’ಬಿ‘ ಗುಂಪಿನಲ್ಲಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್ 2–1ರಲ್ಲಿ ಕೆಎಸ್‌ಸಿಎ ’ಎ‘ ವಿರುದ್ಧ, ಈಸ್ಟ್ ಕಲ್ಚರಲ್ ಅಸೋಸಿಯೇಷನ್ ’ಬಿ‘ ಕೆಎಸ್‌ಬಿಎ ’ಡಿ‘ ವಿರುದ್ಧ 2–1ರಲ್ಲಿ, ಕೆಎಸ್‌ಬಿಎ ‘ಡಿ‘ ತಂಡ 2–0ಯಿಂದ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್ ’ಬಿ‘ ವಿರುದ್ಧ ಜಯಿಸಿತು.

’ಸಿ‘ ಗುಂಪಿನಲ್ಲಿ ಇಂಡಿಯನ್ ಜಿಮ್ಖಾನಾ ’ಬಿ‘ ತಂಡ ಮಲ್ಲೇಶ್ವರಂ ಅಸೋಸಿಯೇಷನ್‌ ವಿರುದ್ಧ 2–0ಯಿಂದ, ಕ್ಯಾಥೊಲಿಕ್ ಕ್ಲಬ್‌ ’ಎ‘ ತಂಡ ಕೆಎಸ್‌ಬಿ ಜೂನಿಯರ್ಸ್ ವಿರುದ್ಧ 2–1ರಲ್ಲಿ, ಇಂಡಿಯನ್ ಜಿಮ್ಖಾನಾ 2–0ಯಿಂದ ಕೆಎಸ್‌ಬಿಎ ಜೂನಿಯರ್ಸ್‌ ವಿರುದ್ಧ,ಕ್ಯಾಥೊಲಿಕ್ ಕ್ಲಬ್‌ ’ಎ‘ ತಂಡ 2–0ಯಿಂದ ಮಲ್ಲೇಶ್ವರಂ ಅಸೋಸಿಯೇಷನ್‌ ವಿರುದ್ಧ, ಎಂಆರ್‌ಎಲ್‌ಎಫ್‌ 2–1ರಲ್ಲಿ ಎಚ್‌ಬಿಸಿಸಿ ’ಬಿ‘ ವಿರುದ್ಧ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.