ADVERTISEMENT

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ 23ರಿಂದ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 15:06 IST
Last Updated 3 ಏಪ್ರಿಲ್ 2021, 15:06 IST
ಕಂಠೀರವ ಒಳಾಂಗಣ ಕ್ರೀಡಾಂಗಣ
ಕಂಠೀರವ ಒಳಾಂಗಣ ಕ್ರೀಡಾಂಗಣ   

ಬೆಂಗಳೂರು: ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸುವ ಪ್ರೊ.ಎನ್‌.ಸಿ.ಪರಪ್ಪ ಸ್ಮಾರಕ ‘ಎ’ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ ಇದೇ 23ರಿಂದ ಮೇ ಎರಡರ ವರೆಗೆ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ 13 ತಂಡಗಳು ಪಾಲ್ಗೊಳ್ಳಲಿವೆ. 23ರಂದು ಸಂಜೆ ನಾಲ್ಕು ಗಂಟೆಗೆ ಮೊದಲ ಪಂದ್ಯ ನಡೆಯಲಿದ್ದು ಎಎಸ್‌ಸಿ ಮತ್ತು ಜೆಎಸ್‌ಸಿ ತಂಡಗಳು ಸೆಣಸಲಿವೆ. ಐದು ಗಂಟೆಗೆ ಬಿಒಬಿ ಮತ್ತು ಬೀಗಲ್ಸ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌, ಆರು ಗಂಟೆಗೆ ಮಂಗಳೂರು ಬಿ.ಸಿ ಮತ್ತು ಸದರ್ನ್‌ ಬ್ಲೂಸ್‌ ತಂಡಗಳು ಸೆಣಸಲಿವೆ.

ಮತ್ತೊಂದು ಅಂಗಣದಲ್ಲಿ ಸಂಜೆ 4 ಗಂಟೆಗೆ ಎಸ್‌.ಪಿ.ಹಾಸ್ಟೆಲ್ ಮತ್ತು ಯಂಗ್ ಒರಾಯನ್ಸ್‌, ಐದು ಗಂಟೆಗೆ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮತ್ತು ಕಸ್ಟಮ್ಸ್‌, ಆರು ಗಂಟೆಗೆ ಕೋರ್‌ ಆಫ್ ಮಿಲಿಟರಿ ಪೊಲೀಸ್ ಮತ್ತು ರಾಜ್‌ಮಹಲ್ ತಂಡಗಳು ಪೈಪೋಟಿ ನಡೆಸಲಿವೆ.

ADVERTISEMENT

ಬ್ಯಾಂಕ್ ಆಫ್ ಬರೋಡ, ಜಯನಗರ ಸ್ಪೋರ್ಟ್ಸ್ ಕ್ಲಬ್‌, ಜಿಎಸ್‌ಟಿ ಆ್ಯಂಡ್ ಕಸ್ಟಮ್ಸ್ ಸ್ಪೋರ್ಟ್ಸ್‌ ಬೋರ್ಡ್‌, ರೈಸಿಂಗ್ ಸ್ಟಾರ್ಸ್‌ ಮೈಸೂರು ಹಾಗೂ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು, ಲೀಗ್‌ನಲ್ಲಿ ಪಾಲ್ಗೊಳ್ಳುವ ಇತರ ತಂಡಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.