ADVERTISEMENT

ಕೆಟಿಟಿಎ ಜಂಟಿ ಕಾರ್ಯದರ್ಶಿಯಾಗಿದ್ದ ಜಿ.ಮನೋಹರನ್‌ ನಿಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 16:46 IST
Last Updated 14 ಡಿಸೆಂಬರ್ 2021, 16:46 IST
ಜಿ.ಮನೋಹರನ್‌
ಜಿ.ಮನೋಹರನ್‌   

ಬೆಂಗಳೂರು: ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಯ (ಕೆಟಿಟಿಎ) ಜಂಟಿ ಕಾರ್ಯದರ್ಶಿಯಾಗಿದ್ದ ಜಿ.ಮನೋಹರನ್‌ (68) ಡಿಸೆಂಬರ್‌ 12ರಂದು ನಿಧನರಾದರು. ಅವರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ.

25 ವರ್ಷಗಳಿಗೂ ಹೆಚ್ಚು ಕಾಲಸಂಸ್ಥೆಯ ಜೊತೆ ಇದ್ದ ಅವರು ಬೆಂಗಳೂರು ನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಂತ್ರಿಕ ಅಧಿಕಾರಿಯೂ ಆಗಿದ್ದರು ಎಂದು ಕೆಟಿಟಿಎ ಗೌರವ ಕಾರ್ಯದರ್ಶಿ ಟಿ.ಜಿ.ಉಪಾಧ್ಯ ತಿಳಿಸಿದ್ದಾರೆ.

ADVERTISEMENT

ಟ್ರಾಫಿಕ್ ವಾರ್ಡನ್ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ಅವರು ಪೂರ್ವ ವಿಭಾಗದ ಪ್ರಭಾರ ಅಧಿಕಾರಿಯಾಗಿ ನಿನೃತ್ತರಾಗಿದ್ದರು. ಸಿವಿಲ್ ಡಿಫೆನ್ಸ್ ಸಂಸ್ಥೆಯಲ್ಲಿ ಮೂರು ವರ್ಷ ಕಾರ್ಯನಿರ್ವಹಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.