ADVERTISEMENT

ರೇಸಿಂಗ್‌: ಗಮನ ಸೆಳೆದ ಕೈಲ್, ಇಟ್ಸುಕೀ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:23 IST
Last Updated 5 ಅಕ್ಟೋಬರ್ 2025, 2:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಕೊಯಮತ್ತೂರು: ಕೈಲ್ ಕುಮಾರನ್‌, ಇಟ್ಸುಕೀ ಸ್ಯಾಟೋ ಹಾಗೂ ಮೆಹುಲ್‌ ಅಗರವಾಲ್‌ ಅವರು ಶನಿವಾರ ಆರಂಭಗೊಂಡ ಮೂರನೇ ಸುತ್ತಿನ ಇಂಡಿಯನ್‌ ರೇಸಿಂಗ್‌ ಫೆಸ್ಟಿವಲ್‌ ಸ್ಪರ್ಧೆಯಲ್ಲಿ ಗಮನ ಸೆಳೆದರು.

ಕಿಚ್ಚಾ ಕಿಂಗ್ಸ್ ಬೆಂಗಳೂರು ತಂಡದ ಕೈಲ್ ಕುಮಾರನ್‌ (26 ನಿ. 34.556 ಸೆ.) ಅವರು ‘ಐಆರ್‌ಎಲ್‌ ಡ್ರೈವರ್‌ ಎ’ ರೇಸ್‌ನಲ್ಲಿ ಮೊದಲಿಗರಾದರು. ಇದೇ ತಂಡದ ನೀಲ್‌ ಜಾನಿ (26ನಿ. 36.934 ಸೆ.) ಮೂರನೇ ಸ್ಥಾನ ಪಡೆದರೆ, ಹೈದರಾಬಾದ್‌ ಬ್ಲ್ಯಾಕ್‌ ಬರ್ಡ್ಸ್‌ ತಂಡದ ಅಖಿಲ್‌ ರವೀಂದ್ರ (26ನಿ. 36.855 ಸೆ.) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ADVERTISEMENT

ಫಾರ್ಮುಲಾ 4 ಇಂಡಿಯಾ ಚಾಂಪಿಯನ್‌ಷಿಪ್‌ನಲ್ಲಿ ಅಹಮದಾಬಾದ್‌ ಅಪೆಕ್ಸ್‌ ತಂಡದ ಇಟ್ಸುಕೀ ಸ್ಯಾಟೋ (27ನಿ. 10.989 ಸೆ.) ಮೊದಲನೆಯವರಾಗಿ ಗುರಿ ಮುಟ್ಟಿದರು. ಕೋಲ್ಕತ್ತ ರಾಯಲ್‌ ಟೈಗರ್ಸ್‌ ತಂಡದ ಗಾಝಿ ಮೊಟ್ಲೆಕರ್‌ (27ನಿ. 31.350 ಸೆ.) ಎರಡನೆಯವರಾಗಿ ಗುರಿ ತಲುಪಿದರು.

ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಡಾರ್ಕ್‌ ಡಾನ್‌ ರೇಸಿಂಗ್‌ ತಂಡದ ಮೆಹುಲ್‌ ಅಗರವಾಲ್‌ ಅವರು (20 ನಿ. 13.369 ಸೆ.) ಅಗ್ರಸ್ಥಾನ ಪಡೆದರು. ಇದೇ ತಂಡದ ಆದಿತ್ಯ ಪಟ್ನಾಯಕ್‌ (20 ನಿ. 17.538 ಸೆ.) ಮೂರನೆಯವರಾಗಿ ಹಾಗೂ ಎಂ ಸ್ಪೋರ್ಟ್ಸ್‌ ತಂಡದ ಧ್ರುವ್‌ ಗೋಸ್ವಾಮಿ (20 ನಿ. 17.203 ಸೆ.) ಎರಡನೆಯವರಾಗಿ ಸ್ಪರ್ಧೆ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.