ADVERTISEMENT

ಕೆವಿಎಸ್‌ ಕಬಡ್ಡಿ: ಕೋಲ್ಕತ್ತ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 16:27 IST
Last Updated 6 ಆಗಸ್ಟ್ 2025, 16:27 IST
ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯ 14 ವರ್ಷದೊಳಗಿನ ಪ್ರಶಸ್ತಿ ಗೆದ್ದ ಕೋಲ್ಕತ್ತ ಬಾಲಕಿಯರ ತಂಡ
ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯ 14 ವರ್ಷದೊಳಗಿನ ಪ್ರಶಸ್ತಿ ಗೆದ್ದ ಕೋಲ್ಕತ್ತ ಬಾಲಕಿಯರ ತಂಡ   

ಬೆಂಗಳೂರು: ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಕೋಲ್ಕತ್ತ ತಂಡ ಗೆದ್ದುಕೊಂಡಿತು.

ಹೆಬ್ಬಾಳದ ಕೇಂದ್ರಿಯ ವಿದ್ಯಾಲಯದ ಮೈದಾನದಲ್ಲಿ ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತ 30– 29ರಿಂದ ಚೆನ್ನೈ ವಿರುದ್ಧ ರೋಚಕ ಗೆಲುವು ಸಾಧಿಸಿತು. ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ದೆಹಲಿ 24–16ರಿಂದ ಜಬಲ್‌ಪುರ ವಿರುದ್ಧ ಜಯಿಸಿತು.


ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕೋಲ್ಕತ್ತ 36–16ರಿಂದ ಜಬಲ್‌ಪುರ ವಿರುದ್ಧ; ಚೆನ್ನೈ 55–22ರಿಂದ ದೆಹಲಿ ವಿರುದ್ಧ ಗೆಲುವು ಸಾಧಿಸಿತ್ತು.

ADVERTISEMENT

ಕೆ.ವಿ ಡಿಆರ್‌ಡಿಒದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಫೈನಲ್‌ನಲ್ಲಿ ಚೆನ್ನೈ 32–20ರಿಂದ ಭುವನೇಶ್ವರ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಕೆ.ವಿ ಎಎಫ್‌ಎಸ್‌ ಯಲಹಂಕದಲ್ಲಿ ನಡೆದ ಬಾಲಕರ 17 ವರ್ಷದೊಳಗಿನ ಫೈನಲ್‌ ಪಂದ್ಯದಲ್ಲಿ ಜೈಪುರ 43–27ರಿಂದ ಕೋಲ್ಕತ್ತ ವಿರುದ್ಧ ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.