ADVERTISEMENT

ಜಪಾನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಕ್ವಾರ್ಟರ್‌ಗೆ

ಪಿಟಿಐ
Published 13 ನವೆಂಬರ್ 2025, 14:29 IST
Last Updated 13 ನವೆಂಬರ್ 2025, 14:29 IST
ಭಾರತದ ಲಕ್ಷ್ಯ ಸೇನ್
ಭಾರತದ ಲಕ್ಷ್ಯ ಸೇನ್   

ಕುಮಾಮೊಟೊ (ಜಪಾನ್‌): ಭಾರತದ ಲಕ್ಷ್ಯ ಸೇನ್ ಅವರು ಕುಮಾಮೊಟೊ ಮಾಸ್ಟರ್ಸ್‌ ಜಪಾನ್‌ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದರು. ಆದರೆ, ಅನುಭವಿ ಎಚ್‌.ಎಸ್‌. ಪ್ರಣಯ್ ಎರಡನೇ ಸುತ್ತಿನಲ್ಲಿ ಅಭಿಯಾನ ಮುಗಿಸಿದರು.

ಏಳನೇ ಶ್ರೇಯಾಂಕ ಹೊಂದಿರುವ 24 ವರ್ಷದ ಸೇನ್‌ 21-13, 21-11ರಿಂದ ಸಿಂಗಪುರದ ಜಿಯಾ ಹೆಂಗ್ ಜೇಸನ್ ತೆಹ್ ಅವರನ್ನು ಹಿಮ್ಮೆಟ್ಟಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಜಿಯಾ ಕೇವಲ 39 ನಿಮಿಷದಲ್ಲಿ ಸೋಲೊಪ್ಪಿಕೊಂಡರು.

15ನೇ ಕ್ರಮಾಂಕದ ಭಾರತದ ಆಟಗಾರ ಮುಂದಿನ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ (ಸಿಂಗಪುರ) ಅವರನ್ನು ಎದುರಿಸಲಿದ್ದಾರೆ.

ADVERTISEMENT

33 ವರ್ಷದ ಪ್ರಣಯ್‌ 18-21, 15-21ರಿಂದ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅವರಿಗೆ ಶರಣಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.