ADVERTISEMENT

ಲೆಜೆಂಡ್ಸ್‌ ಆಫ್‌ ಚೆಸ್‌ ಟೂರ್ನಿ: ವಿಶ್ವನಾಥನ್‌ ಆನಂದ್‌ಗೆ ಸತತ ಮೂರನೇ ಸೋಲು

ಪಿಟಿಐ
Published 24 ಜುಲೈ 2020, 9:26 IST
Last Updated 24 ಜುಲೈ 2020, 9:26 IST
ವಿಶ್ವನಾಥನ್ ಆನಂದ್‌
ವಿಶ್ವನಾಥನ್ ಆನಂದ್‌   

ಚೆನ್ನೈ: ಭಾರತದ ಖ್ಯಾತ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಲೆಜೆಂಡ್ಸ್‌ ಆಫ್‌ ಚೆಸ್‌ ಆನ್‌ಲೈನ್‌ ಟೂರ್ನಿಯಲ್ಲಿ ಸತತ ಮೂರನೇ ಸೋಲು ಕಂಡಿದ್ದಾರೆ. ಗುರುವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ ಅವರು 0.5–2.5ರಿಂದ ರಷ್ಯಾದ ವ್ಲಾಡಿಮಿರ್‌ ಕ್ರಾಮ್ನಿಕ್‌ ಎದುರು ಸೋತರು. ಸದ್ಯ ಆನಂದ್‌ ಅವರು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್‌ ಆನಂದ್‌ ಅವರು ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಪೀಟರ್‌ ಸ್ವಿಡ್ಲರ್‌ ಹಾಗೂ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಪರಾಭವಗೊಂಡಿದ್ದರು.

ಕೆಲವೊಂದು ಜಾಣ ನಡೆಗಳ ಮಧ್ಯೆಯೂ ರಷ್ಯಾ ಪಟು ಎದುರು ಪಂದ್ಯದ ಮೊದಲ ಸುತ್ತಿನಲ್ಲಿ ಆನಂದ್‌ ಕೈಚೆಲ್ಲಿದರು. ಎರಡನೇ ಸುತ್ತಿನಲ್ಲೂ ಸೋತ ಅವರು‌ ಮೂರನೇ ಸುತ್ತಿನಲ್ಲಿ ಡ್ರಾ ಮಾಡಿಕೊಂಡು ಗೆಲುವಿನ ವಿಶ್ವಾಸ ಕಳೆದುಕೊಂಡರು.

ADVERTISEMENT

ಚೆನ್ನೈ ಮೂಲದ ಆನಂದ್‌ ಅವರು ಮ್ಯಾಗ್ನಸ್‌ ಕಾರ್ಲ್‌ಸನ್‌ ಚೆಸ್‌ ಟೂರ್‌ನಲ್ಲಿ ಮೊದಲ ಬಾರಿ ಆಡುತ್ತಿದ್ದಾರೆ.

ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಕಾರ್ಲ್‌ಸನ್, ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಪೀಟರ್‌ ಸ್ವಿಡ್ಲರ್‌ ಜೊತೆಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಮೂರು ಗೆಲುವು ಸಾಧಿಸಿರುವ ಕಾರ್ಲ್‌ಸನ್‌ ಬಳಿ ಒಂಬತ್ತು ಪಾಯಿಂಟ್‌ಗಳಿವೆ.

ಮತ್ತೊಂದು ಪಂದ್ಯದಲ್ಲಿ ಚೀನಾದ ದಿಂಗ್‌ ಲೀರೆನ್‌ ಅವರು 1.5–0.5ರಿಂದ ಉಕ್ರೇನ್‌ನ ವಾಸಿಲ್‌ ಇವಾನ್ಚುಕ್‌ ಎದುರು ಎದುರು ಸೋತರು.

ಮುಂದಿನ ಪಂದ್ಯದಲ್ಲಿ ಆನಂದ್, ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.