ಗುರುಗಾಂವ್: ರಾಷ್ಟ್ರರಾಜಧಾನಿಯ ವಾಯು ಮಾಲಿನ್ಯ ಗುರುವಾರ ಆರಂಭವಾಗಬೇಕಾಗಿದ್ದ ಏಷ್ಯಾದ ಪ್ರಮುಖ ಗಾಲ್ಫ್ ಟೂರ್ನಿ ಮೇಲೆ ಕರಿನೆರಳು ಬೀರಿತು. ವಿಷಪೂರಿತ ಗಾಳಿಯಿಂದಾಗಿ ಟೂರ್ನಿಯ ಆರಂಭವನ್ನು ತಡೆಹಿಡಿಯಲಾಯಿತು.
‘ಮಾಲಿನ್ಯದ ಪ್ರಮಾಣವನ್ನು ಗಮನಿಸಿದರೆ ಟೂರ್ನಿಯನ್ನು ನಡೆಸುವುದು ಕಷ್ಟ ಎಂದೆನಿಸುತ್ತದೆ. ಆರಂಭಗೊಂಡರೂ ಆದಷ್ಟು ಬೇಗ ಮುಗಿಸಬೇಕಾದ ಅನಿವಾರ್ಯ ಸ್ಥಿತಿ ಒದಗಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳಿಗ್ಗೆ ದಟ್ಟವಾದ ಹೊಂಜಿನಿಂದಾಗಿ ಹೊರಗೆ ಇಳಿಯಲು ಆಗದ ಕಾರಣ 5 ತಾಸು ತಡವಾಗಿ ಆಟಗಾರರು ಕೋರ್ಸ್‌ಗೆ ತೆರಳಿದರು. ಅವರ ಪೈಕಿ ಬಹುತೇಕರು ಮುಖಗವಸು ಧರಿಸಿದ್ದರು. ಬಾಂಗ್ಲಾದೇಶದ ಮೊಹಮ್ಮದ್ ಸಿದ್ದಿಕುರ್ ರಹಿಮಾನ್ ಚೆಂಡನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ನಿರಾಸೆಯಿಂದ ವಾಪಸಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.