ADVERTISEMENT

ಜೂಲಿಯಸ್‌ ಬೇರ್‌ ಟೂರ್ನಿ: ಹ್ಯಾನ್ಸ್‌ ಮೋಸದಾಟ: ಕಾರ್ಲ್‌ಸನ್‌ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 22:28 IST
Last Updated 27 ಸೆಪ್ಟೆಂಬರ್ 2022, 22:28 IST
ಮ್ಯಾಗ್ನಸ್‌ ಕಾರ್ಲ್‌ಸನ್‌
ಮ್ಯಾಗ್ನಸ್‌ ಕಾರ್ಲ್‌ಸನ್‌   

ನವದೆಹಲಿ: ಅಮೆರಿಕದ ಚೆಸ್‌ ಆಟಗಾರ ಹ್ಯಾನ್ಸ್‌ ನೀಮನ್ ಅವರು ಮೋಸದ ಆಟ ಆಡುತ್ತಿದ್ದಾರೆ ಎಂದು ವಿಶ್ವದ ಅಗ್ರ ರ್‍ಯಾಂಕಿಂಗ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಆರೋಪಿಸಿದ್ದಾರೆ.

‘ನೀಮನ್‌ ಅವರು ಬಹಿರಂಗವಾಗಿ ಏನು ತಪ್ಪು ಒಪ್ಪಿಕೊಂಡಿದ್ದಾರೋ, ಅದಕ್ಕಿಂತಲೂ ಹೆಚ್ಚು ಮೋಸದಾಟದಲ್ಲಿ ತೊಡಗಿದ್ದಾರೆ’ ಎಂದು ಕಾರ್ಲ್‌ಸನ್‌ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ದೂರಿದ್ದಾರೆ.

ಇತ್ತೀಚೆಗೆ ನಡೆದ ಜೂಲಿಯಸ್‌ ಬೇರ್‌ ಜೆನರೇಷನ್‌ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಕಾರ್ಲ್‌ಸನ್‌, 19 ವರ್ಷದ ನೀಮನ್‌ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ನಡೆಯ ಬಳಿ ಹಿಂದೆ ಸರಿದಿದ್ದರು.

ADVERTISEMENT

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಮೆರಿಕದ ಸೇಂಟ್‌ ಲೂಯಿಸ್‌ನಲ್ಲಿ ನಡೆದಿದ್ದ ಸಿಂಕ್‌ಫೀಲ್ಡ್‌ ಕಪ್‌ ಟೂರ್ನಿಯಲ್ಲಿ 31 ವರ್ಷದ ಕಾರ್ಲ್‌ಸನ್‌, ನೀಮನ್‌ ಎದುರು ಸೋತಿದ್ದರು. ಅಮೆರಿಕದ ಆಟಗಾರ ಮೋಸದ ಆಟವಾಡಿದ್ದಾರೆ ಎಂದು ಆರೋಪಿಸಿ, ಕಾರ್ಲ್‌ಸನ್‌ ಟೂರ್ನಿಯಿಂದ ಹಿಂದೆ
ಸರಿದಿದ್ದರು.

‘ಈ ಹಿಂದೆ 12 ವರ್ಷ ಮತ್ತು 16 ವರ್ಷದವನಾಗಿದ್ದಾಗ ಆಲ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಆಡುವಾಗ ಮೋಸ ಮಾಡಿದ್ದೆ’ ಎಂದು ನೀಮನ್‌ ಒಪ್ಪಿಕೊಂಡಿದ್ದರು. ಆದರೆ ಆನ್‌ಲೈನ್‌ ಮಾತ್ರವಲ್ಲ, ಸಾಮಾನ್ಯ ಆಟದ ವೇಳೆಯೂ ಮೋಸ ಮಾಡುತ್ತಿದ್ದಾರೆ ಎಂಬುದು ಕಾರ್ಲ್‌ಸನ್‌ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.