ADVERTISEMENT

ಡೆಫಿಲಿಂಪಿಕ್ಸ್‌ | ಚಿನ್ನಕ್ಕೆ ಗುರಿಯಿಟ್ಟ ಮಹಿತ್‌

ಡೆಫಿಲಿಂಪಿಕ್ಸ್‌ನಲ್ಲಿ ಸಂಧುಗೆ ನಾಲ್ಕನೇ ಪದಕ

ಪಿಟಿಐ
Published 22 ನವೆಂಬರ್ 2025, 15:32 IST
Last Updated 22 ನವೆಂಬರ್ 2025, 15:32 IST
ಮಹಿತ್‌ ಸಂಧು –ಎಕ್ಸ್‌ ಚಿತ್ರ
ಮಹಿತ್‌ ಸಂಧು –ಎಕ್ಸ್‌ ಚಿತ್ರ   

ನವದೆಹಲಿ: ಭಾರತದ ಯುವ ಶೂಟರ್‌ ಮಹಿತ್‌ ಸಂಧು ಅವರು ಟೋಕಿಯೊದಲ್ಲಿ ನಡೆಯುತ್ತಿರುವ 25ನೇ ಡೆಫಿಲಿಂಪಿಕ್ಸ್‌ನಲ್ಲಿ (ಶ್ರವಣದೋಷವಿರುವರಿಗೆ ನಡೆಯುವ ಕ್ರೀಡೆ) ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್‌ನಲ್ಲಿ ಚಿನ್ನ ಗೆದ್ದರು.

ತನ್ನ ಚೊಚ್ಚಲ ಡೆಫಿಲಿಂಪಿಕ್ಸ್‌ನಲ್ಲಿ ಅದ್ಭುತ ಸಾಧನೆ ಮುಂದುವರಿಸಿರುವ 21 ವರ್ಷದ ಮಹಿತ್‌ ಅವರಿಗೆ ನಾಲ್ಕನೇ ಪದಕ ಇದಾಗಿದೆ.

45 ಶಾಟ್‌ಗಳಲ್ಲಿ ಒಟ್ಟು 456.0 ಅಂಕಗಳನ್ನು ಗಳಿಸಿದ ಮಹಿತ್‌ ಕೂಟದಲ್ಲಿ ಎರಡನೇ ಚಿನ್ನ ಗೆದ್ದರು. ದಕ್ಷಿಣ ಕೊರಿಯಾದ ಡೈನ್ ಜಿಯೋಂಗ್ (453.5) ಬೆಳ್ಳಿ ಪದಕ ಗೆದ್ದರೆ, ಹಂಗರಿಯ ಮೀರಾ ಝುಜ್ಸನ್ನಾ (438.6) ಕಂಚಿನ ಪದಕ ಪಡೆದರು.

ADVERTISEMENT

ಮಹಿತ್‌ ಅರ್ಹತಾ ಸುತ್ತಿನಲ್ಲಿ ತಮ್ಮದೇ ವಿಶ್ವದಾಖಲೆಯಲ್ಲಿ ಉತ್ತಮಗೊಳಿಸಿದರು. ಒಟ್ಟು 585 ಅಂಕಗಳನ್ನು ಸಂಪಾದಿಸಿದ ಅವರು ಕಳೆದ ವರ್ಷ ವಿಶ್ವ ಶೂಟಿಂಗ್‌ (ಶ್ರವಣದೋಷವುಳ್ಳವರ) ಚಾಂಪಿಯನ್‌ಷಿ‍ಪ್‌ನಲ್ಲಿ ತಾವೇ ನಿರ್ಮಿಸಿದ್ದ (576) ದಾಖಲೆಯನ್ನು ಸುಧಾರಿಸಿದರು. 

ಫೈನಲ್‌ ತಲುಪಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ನತಾಶಾ ಜೋಶಿ ಅವರು 417.1 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದಿದ್ದರು.

ಡೆಫಿಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳು ಈವರೆಗೆ ಐದು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚು ಸೇರಿ ಒಟ್ಟು 14 ಪದಕಗಳನ್ನು ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.