
ಮಂಗಳೂರು: ನಗರದ ಕಾಸ್ಮೊಪೊಲಿಟನ್ ಕ್ಲಬ್ ಆಯೋಜಿಸಿರುವ ರಾಜ್ಯಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಷಿಪ್ ಬಾವುಟಗುಡ್ಡದಲ್ಲಿರುವ ಕ್ಲಬ್‌ನ ಕ್ರೀಡಾಂಗಣದಲ್ಲಿ ಫೆ.20ರಿಂದ ಮಾರ್ಚ್ 1ರವರೆಗೆ ನಡೆಯಲಿದೆ.
ಬಿ.ಭಾಸ್ಕರ್, ಎಂ.ಯೋಗೀಶ್, ಬಿ.ಸಿ ಕಾರ್ತಿಕ್, ಕೀರ್ತಿ ಪಾಂಡ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ 14 ಆಟಗಾರರು ಪಾಲ್ಗೊಳ್ಳಲಿದ್ದಾರೆ. 20ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಚಾಂಪಿಯನ್‌ಷಿಪ್ ಉದ್ಘಾಟಿಸುವರು ಎಂದು ಕ್ಲಬ್ ಉಪಾಧ್ಯಕ್ಷ ರಾಜಗೋಪಾಲ ರೈ ಗುರುವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1901ರಲ್ಲಿ ಸ್ಥಾಪನೆಯಾಗಿರುವ ಕಾಸ್ಮೊಪಾಲಿಟನ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಚಟುವಟಿಕೆ ನಡೆಸುತ್ತಿದೆ. ಕೇರಂ, ಕ್ರಿಕೆಟ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದು ಅವರು ತಿಳಿಸಿದರು.
ಕ್ಲಬ್ ಕಾರ್ಯದರ್ಶಿ ಎಂ.ಸಿ.ಶೆಟ್ಟಿ, ಕೋಶಾಧಿಕಾರಿ ದೇವಿಚರಣ್ ಶೆಟ್ಟಿ, ಪ್ರಮುಖರಾದ ಯೋಗೇಶ್ ಕುಮಾರ್, ಮನೋಜ್ ಕುಮಾರ್, ಪ್ರದೀಪ್ ರೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.