ADVERTISEMENT

ಮಂಗಳೂರು ಓಪನ್ ಶೂಟಿಂಗ್: ಸನಿಕಾ, ವಿಶ್ವಗೆ ಪ್ರಶಸ್ತಿ

ನ್ಯಾಷನಲ್ ರೆಕಾರ್ಡ್‌ ಮಾಸ್ಟರ್ಸ್ ವಿಭಾಗದಲ್ಲಿ ಚಿಕ್ಕರಂಗಸ್ವಾಮಿ, ಅನ್ಫಲ್ ದಲಾಲ್ ಮಿಂಚು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:31 IST
Last Updated 3 ಸೆಪ್ಟೆಂಬರ್ 2022, 19:31 IST
ಸನಿಕಾ ಸುಲ್ತಾನ
ಸನಿಕಾ ಸುಲ್ತಾನ   

ಮಂಗಳೂರು: ಕರ್ನಾಟಕದ ಸನಿಕಾ ಸುಲ್ತಾನ ಮತ್ತು ತಮಿಳುನಾಡಿನ ವಿಶ್ವ ಪಿ.ಆರ್ ಅವರು ಮಂಗಳೂರು ರೈಫಲ್ ಕ್ಲಬ್ ಆಯೋಜಿಸಿರುವ ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ನ್ಯಾಷನಲ್ ರೆಕಾರ್ಡ್ ವಿಭಾಗದ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಪ್ರಶಸ್ತಿ ಜಯಿಸಿದರು.

ಕದ್ರಿಯಲ್ಲಿರುವ ಕ್ಲಬ್‌ನ ಅಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಸನಿಕಾ ಅವರು ಸ್ಥಳೀಯ ಶೂಟರ್ ಲೆನೊ ಕ್ಯಾರೊಲಿನ್ ಅವರ ಸವಾಲು ಮೀರಿದರು. ಮಹಾರಾಷ್ಟ್ರದ ಜ್ಯೋತಿ ಅನಾ ಬಾಗೇಕೇರಿ ಮೂರನೇ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಕರ್ನಾಟಕದ ಪ್ರೀತಮ್ ಎರಡನೇ ಸ್ಥಾನ ಗಳಿಸಿದರೆ ಮೂರನೇ ಸ್ಥಾನ ಸುಶಾಂತ್ ನಿಂಬಣ್ಣವರ್ ಅವರ ಪಾಲಾಯಿತು.‌

ಇತರ ಫಲಿತಾಂಶಗಳು: ಪಿಸ್ತೂಲು ನ್ಯಾಷನಲ್ ರೆಕಾರ್ಡ್‌ ಮಾಸ್ಟರ್ಸ್ ವಿಭಾಗ: ಚಿಕ್ಕರಂಗಸ್ವಾಮಿ–1, ಶಂಕರ್ ಶೆಟ್ಟಿ–2, ಪ್ರಶಾಂತ್ ಪಾವಸ್ಕರ್–3 (ಕರ್ನಾಟಕ), 10 ಮೀ ಏರ್ ರೈಫಲ್ ನ್ಯಾಷನಲ್ ರೆಕಾರ್ಡ್‌ ಮಾಸ್ಟರ್ಸ್: ಅನ್ಫಲ್ ದಲಾಲ್–1, ಜಗದೀಶ್ ಕುಮಾರ್ ನಾಯಕ್–2 (ಇಬ್ಬರೂ ಕರ್ನಾಟಕ), ಪಿಸ್ತೂಲು, ಮಹಿಳೆಯರ ಸಬ್ ಯೂತ್: ಗಾಂಭೀರ್ಯ–1, ರಿಷಿಕಾ–2 (ಇಬ್ಬರೂ ಕರ್ನಾಟಕ), ಸಿಯೋನ (ತಮಿಳುನಾಡು)–3, ಯೂತ್‌: ಗಾಂಭೀರ್ಯ–1, ರಿಷಿಕಾ–2, ನಿಯಾ ಮೋಹನ್ (ಮೂವರೂ ಕರ್ನಾಟಕ), ಜೂನಿಯರ್: ಗಾಂಭೀರ್ಯ–1, ರಿಷಿಕಾ–2, ನಿಯಾ ಮೋಹನ್–3; ಪಿಸ್ತೂಲು, ಪುರುಷರ ಯೂತ್‌ ನ್ಯಾಷನಲ್ ರೆಕಾರ್ಡ್ ವಿಭಾಗ: ಧೀರಜ್‌–1, ಪ್ರಣವ್‌ ಮೋಹನ್–2, ಕೆನಜ್‌–3 (ಮೂವರೂ ಕರ್ನಾಟಕ); ಪಿಸ್ತೂಲು, ಪುರುಷರ ಸಬ್‌ ಜೂನಿಯರ್ ನ್ಯಾಷನಲ್ ರೆಕಾರ್ಡ್ ವಿಭಾಗ: ಪ್ರಣವ್ ಮೋಹನ್‌–1, ಕೆನಜ್‌–2, ಅಹಮ್ಮದ್ ನೂಹ್ (ಕೇರಳ)–3.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.