ADVERTISEMENT

Tokyo Olympics| ಟೇಬಲ್‌ ಟೆನಿಸ್‌: ಭರವಸೆ ಉಳಿಸಿದ ಮಣಿಕಾ, ಸುತೀರ್ಥ

ಟೇಬಲ್ ಟೆನಿಸ್: ಮಿಶ್ರ ಡಬಲ್ಸ್‌ನಲ್ಲಿ ಶರತ್ ಕಮಲ್ ಜೋಡಿಗೆ ನಿರಾಶೆ

ಪಿಟಿಐ
Published 24 ಜುಲೈ 2021, 18:16 IST
Last Updated 24 ಜುಲೈ 2021, 18:16 IST
ಸುತೀರ್ಥ ಮುಖರ್ಜಿ –ಎಎಫ್‌ಪಿ ಚಿತ್ರ
ಸುತೀರ್ಥ ಮುಖರ್ಜಿ –ಎಎಫ್‌ಪಿ ಚಿತ್ರ   

ಟೋಕಿಯೊ: ಭಾರತದ ಮಣಿಕಾ ಬಾತ್ರಾ ಮತ್ತು ಸುತೀರ್ಥ ಮುಖರ್ಜಿ ಶನಿವಾರ ನಡೆದ ಟೇಬಲ್‌ ಟೆನಿಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿನ ಆರಂಭ ಮಾಡಿ ಭರವಸೆ ಮೂಡಿಸಿದರು.

62ನೇ ಶ್ರೇಯಾಂಕದ ಮಣಿಕಾ 4–0ಯಿಂದ 94ನೇ ಶ್ರೇಯಾಂಕದ, ಬ್ರಿಟನ್‌ ಆಟಗಾರ್ತಿ ಟಿನ್ ಟಿನ್ ಹೊ ವಿರುದ್ಧ ನಿರಾಯಾಸವಾಗಿ ಜಯ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ 98ನೇ ಶ್ರೇಯಾಂಕದ ಸುತೀರ್ಥ 5-11, 11-9, 11-13, 9-11, 11-3, 11-9, 11-5 ರಿಂದ ಸ್ವೀಡನ್‌ನ 78ನೇ ರ‍್ಯಾಂಕ್‌ನ ಲಿಂಡಾ ಬರ್ಗ್‌ಸ್ಟಾರ್ಮ್ ವಿರುದ್ಧ ರೋಚಕ ಜಯ ಸಾಧಿಸಿದರು. ಸುತೀರ್ಥಗೆ ಇದು ಚೊಚ್ಚಲ ಒಲಿಂಪಿಕ್ಸ್‌.

ADVERTISEMENT

ಅವರು ಎರಡನೇ ಸುತ್ತಿನಲ್ಲಿ ಪೋರ್ಚುಗಲ್‌ನ ಫೂ ಯು ವಿರುದ್ಧ ಮತ್ತು ಮಣಿಕಾ ಉಕ್ರೇನ್‌ನ ಮಾರ್ಗರೀಟಾ ಪೆಸೋಸ್ಕಾ ವಿರುದ್ಧ ಆಡುವರು.

ಮಿಶ್ರ ಡಬಲ್ಸ್‌ ನಿರಾಶೆ: ಬೆಳಿಗ್ಗೆ ನಡೆದ ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಮತ್ತು ಅಚಂತಾ ಶರತ್ ಕಮಲ್ ಜೋಡಿಯು ನಿರಾಶೆ ಅನುಭವಿಸಿತು.

ಭಾರತದ ಜೋಡಿಯು 16ರ ಘಟ್ಟದಲ್ಲಿ 0–4ರಿಂದ ಮೂರನೇ ಶ್ರೇಯಾಂಕದ, ತೈಪೆಯ ಲಿನ್ ಯುನ್ ಜು ಮತ್ತು ಚೆಂಗ್ ಐ ಚಿಂಗ್ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.