ADVERTISEMENT

ಹಾಕಿ: ಭಾರತ ತಂಡಕ್ಕೆ ಮನ್‌ಪ್ರೀತ್ ನಾಯಕತ್ವ

ದಕ್ಷಿಣ ಆಫ್ರಿಕಾದಲ್ಲಿ ಎಫ್‌ಐಎಚ್ ಲೀಗ್ ಹಾಕಿ; ಇಬ್ಬರು ನವಪ್ರತಿಭೆಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 11:41 IST
Last Updated 27 ಜನವರಿ 2022, 11:41 IST
ಮುಖ್ಯ ಕೋಚ್ ಗ್ರಹಾಂ ರೀಡ್ ಮತ್ತು ನಾಯಕ ಮನ್‌ಪ್ರೀತ್ ಸಿಂಗ್
ಮುಖ್ಯ ಕೋಚ್ ಗ್ರಹಾಂ ರೀಡ್ ಮತ್ತು ನಾಯಕ ಮನ್‌ಪ್ರೀತ್ ಸಿಂಗ್   

ಬೆಂಗಳೂರು: ಮಿಡ್‌ಫೀಲ್ಡರ್ ಮನಪ್ರೀತ್ ಸಿಂಗ್ ದಕ್ಷಿಣ ಆಫ್ರಿಕಾದಲ್ಲಿ ನೆಯಲಿರುವ ಡಬಲ್‌ ಲೆಗ್ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಗುರುವಾರ ಹಾಕಿ ಇಂಡಿಯಾ 20 ಆಟಗಾರರ ತಂಡವನ್ನು ಪ್ರಕಟಿಸಿದೆ. ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಉಪನಾಯಕರಾಗಿದ್ದಾರೆ. ಫೆಬ್ರುವರಿ 8ರಿಂದ 13ರವರೆಗೆ ಟೂರ್ನಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಮತ್ತು ಫ್ರಾನ್ಸ್ ತಂಡಗಳು ಸ್ಪರ್ಧಿಸಲಿವೆ. ತಂಡವು ಫೆಬ್ರುವರಿ 4ರಂದು ಪ್ರಯಾಣ ಬೆಳೆಸಲಿದೆ.

ಯುವ ಡ್ರ್ಯಾಗ್‌ಫ್ಲಿಕರ್ ಜುಗರಾಜ್ ಸಿಂಗ್ ಮತ್ತು ಸ್ಟ್ರೈಕರ್ ಅಭಿಷೇಕ್ ಈ ತಂಡದಲ್ಲಿ ಸ್ಥಾನ ಪಡೆದಿರುವ ನವಪ್ರತಿಭೆಗಳು.

ADVERTISEMENT

ಅಟಾರಿಯ ಜುಗರಾಜ್ ಇದೇ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಚೆಗೆ ನಡೆದ ರಾಷ್ಟ್ರೀಯ ಅಂತರ ಇಲಾಖೆ ಸೀನಿಯರ್ ಹಾಕಿ ಟೂರ್ನಿಯಲ್ಲಿ ಅವರು ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ತಂಡದ ಪರ ಗಮನ ಸೆಳೆದಿದ್ದರು.

ಸ್ಟ್ರೈಕರ್ ಅಭಿಷೇಕ್ ಜೂನಿಯರ್ ಪ್ರತಿಭಾಶೋಧದಲ್ಲಿ ಆಯ್ಕೆಯಾದವರು. 2017 ಮತ್ತು 2018ರಲ್ಲಿ ಅಲ್ಲದೇ ಸುಲ್ತಾನ್ ಆಫ್ ಜೊಹರ್ ಕಪ್ ಟೂರ್ನಿಯಲ್ಲಿ ಭಾರತ ಯುವ ತಂಡದಲ್ಲಿ ಆಡಿದ್ದರು.

ಹರಿಯಾಣದ ಸೋನೆಪತ್‌ನ ಅಭಿಷೇಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡವನ್ನು ಪ್ರತಿನಿಧಿಸಿದ್ದರು.

ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮತ್ತು ಕೃಷನ್ ಬಹಾದ್ದೂರ್ ಪಾಠಕ್ ಕೂಡ ಸ್ಥಾನ ಪಡೆದಿದ್ದಾರೆ.

‘ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಮೂರು ವಾರಗಳ ತರಬೇತಿ ಶಿಬಿರ ನಡೆಯಿತು. ಅದರ ನಂತರವಷ್ಟೇ ತಂಡದ ಆಯ್ಕೆ ಮಾಡಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ತಂಡದ ಆಟಗಾರರು ಮತ್ತು ಇಬ್ಬರು ಹೊಸಬರು ಈ ಬಳಗದಲ್ಲಿದ್ದಾರೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ತಿಳಿಸಿದ್ದಾರೆ.

ತಂಡ ಇಂತಿದೆ:

ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್ (ನಾಯಕ), ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಜಸ್ಕರಣ್ ಸಿಂಗ್, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್

ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್ (ಉಪನಾಯಕ), ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ವರುಣ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಜುಗರಾಜ್ ಸಿಂಗ್

ಗೋಲ್‌ಕೀಪರ್ಸ್: ಪಿ.ಆರ್. ಶ್ರೀಜೇಶ್, ಕೃಷನ್ ಬಹಾದ್ದೂರ್ ಪಾಠಕ್.
ಫಾರ್ವರ್ಡ್ಸ್: ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶದೀಪ್ ಸಿಂಗ್, ಶಿಲಾನಂದ ಲಕ್ರಾ, ದಿಲ್‌ಪ್ರೀತ್ ಸಿಂಗ್, ಅಭಿಷೇಕ್.

ಮೀಸಲು ಆಟಗಾರರು: ಸೂರಜ್ ಕರ್ಕೆರಾ, ಮನದೀಪ್ ಮೊರ್, ರಾಜಕುಮಾರ್ ಪಾಲ್, ಸುಮಿತ್, ಗುರುಸಾಹೀಬ್‌ಜಿತ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.