ಮನ್ಸುಖ್ ಮಾಂಡವೀಯ
ನವದೆಹಲಿ: ಉದ್ದೀಪನ ಮದ್ದು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಇದೇ 18 ರಿಂದ 20ರವರೆಗೆ ವಾರಾಣಸಿಯಲ್ಲಿ ಚಿಂತನ ಶಿಬಿರ ಏರ್ಪಡಿಸಿದೆ.
‘ಭಾರತದ ಅಭಿವೃದ್ಧಿಗೆ ನಶೆ ಮುಕ್ತ ಭಾರತ’ ಹೆಸರಿನ ಈ ಶಿಬಿರವು 2047ರ ಒಳಗೆ ಭಾರತವನ್ನು ಉದ್ದೀಪನ ಮದ್ದು ಸೇವನೆಯಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.
18ರಂದು ನೋಂದಣಿ ಆರಂಭವಾಗಲಿದೆ. ಮರುದಿನದಿಂದ ಶಿಬಿರ ನಡೆಯಲಿದೆ. ಚರ್ಚೆಯಲ್ಲಿನ ಪ್ರಮುಖ ಅಂಶ ಆಧರಿಸಿ ಅಂತಿಮ ದಿನ ‘ಕಾಶಿ ಘೋಷಣೆ’ ಹೆಸರಿನಲ್ಲಿ ಕ್ರಿಯಾ ಯೋಜನೆ ಬಿಡುಗಡೆ ಮಾಡಲಾಗುವುದು ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.