ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ಶೂಟಿಂಗ್‌ ತಂಡ: ಮೂರು ವಿಭಾಗಗಳಲ್ಲಿ ಮನು ಸ್ಪರ್ಧೆ

ಪಿಟಿಐ
Published 4 ಏಪ್ರಿಲ್ 2021, 19:30 IST
Last Updated 4 ಏಪ್ರಿಲ್ 2021, 19:30 IST
ಮನು ಭಾಕರ್–ಪಿಟಿಐ ಚಿತ್ರ
ಮನು ಭಾಕರ್–ಪಿಟಿಐ ಚಿತ್ರ   

ನವದೆಹಲಿ: ಯುವ ಶೂಟರ್ ಮನು ಭಾಕರ್ ಅವರು ಟೋಕಿಯೊ ಒಲಿಂಪಿಕ್ಸ್‌ನ ಮೂರು ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜುಲೈನಲ್ಲಿ ನಡೆಯುವ ಕೂಟಕ್ಕೆ ಭಾರತ ಶೂಟಿಂಗ್ ತಂಡವನ್ನು ಭಾನುವಾರ ಪ್ರಕಟಿಸಲಾಗಿದೆ.

ಮನು ಭಾಕರ್ ಅವರು ಮಹಿಳೆಯರ 25 ಹಾಗೂ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗಗಳು ಹಾಗೂ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಕಳೆದ ತಿಂಗಳು ದೆಹಲಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಚಿಂಕಿ ಯಾದವ್ ಅವರ 25 ಮೀ. ಪಿಸ್ತೂಲ್ ವಿಭಾಗದ ಕೋಟಾವನ್ನು ಅಂಜುಮ್ ಮೌದ್ಗಿಲ್ ಅವರಿಗೆ ನೀಡಲು ರಾಷ್ಟ್ರೀಯ ಆಯ್ಕೆ ಸಮಿತಿಯು ನಿರ್ಧರಿಸಿತು. ಇದರಿಂದಾಗಿ ಮಹಿಳೆಯರ 50 ಮೀ. ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಅಂಜುಮ್ ಅವರು ತೇಜಸ್ವಿನಿ ಸಾವಂತ್‌ ಅವರ ಜೊತೆಯಾಗಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ.

ADVERTISEMENT

ಕೋವಿಡ್‌–19 ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ, ಭಾರತ ರೈಫಲ್ ಸಂಸ್ಥೆಯು, ಪ್ರತಿ ವಿಭಾಗದಲ್ಲಿ ಮುಖ್ಯ ಸ್ಪರ್ಧಿಗಳೊಂದಿಗೆ ಇಬ್ಬರನ್ನು ಕಾಯ್ದಿಟ್ಟ ಸ್ಪ‌ರ್ಧಿಗಳಾಗಿ ಆಯ್ಕೆ ಮಾಡಿದೆ.

2018ರ ಜಕಾರ್ತ ಏಷ್ಯನ್ ಗೇಮ್ಸ್‌ನಿಂದ ಹಿಡಿದು ಈ ವರ್ಷದ ಆರಂಭದಲ್ಲಿ ನಡೆದ ಎರಡು ಹಂತಗಳ ಟ್ರಯಲ್ಸ್‌ನಲ್ಲಿ ತೋರಿದ ಸಾಮರ್ಥ್ಯವನ್ನು ಆಧರಿಸಿ ಶೂಟರ್‌ಗಳನ್ನು ಆಯ್ಕೆ ಮಾಡಲಾಗಿದೆ.

ತಂಡಗಳು ಇಂತಿವೆ: ಪುರುಷರು: 10 ಮೀ. ಏರ್ ರೈಫಲ್‌: ದಿವ್ಯಾಂಶ್ ಸಿಂಗ್ ಪನ್ವರ್‌, ದೀಪಕ್ ಕುಮಾರ್; ಕಾಯ್ದಿರಿಸಿದ ಸ್ಪರ್ಧಿಗಳು: ಸಂದೀಪ್ ಸಿಂಗ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್‌. 50 ಮೀ. ರೈಫಲ್ ತ್ರಿ ಪೋಸಿಷನ್‌: ಸಂಜೀವ್ ರಜಪೂತ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್‌; ಕಾಯ್ದಿರಿಸಿದ ಸ್ಪರ್ಧಿಗಳು: ಸ್ವಪ್ನಿಲ್ ಕುಸಾಲೆ, ಚೈನ್ ಸಿಂಗ್‌. 10 ಮೀ. ಏರ್ ಪಿಸ್ತೂಲ್‌: ಸೌರಭ್ ಚೌಧರಿ, ಅಭಿಷೇಕ್ ವರ್ಮಾ; ಕಾಯ್ದಿರಿಸಿದ ಸ್ಪರ್ಧಿಗಳು: ಶಹಜಾರ್ ರಿಜ್ವಿ, ಓಂಪ್ರಕಾಶ್ ಮಿಥರ್ವಾಲ್. ಸ್ಕೀಟ್‌: ಅಂಗದ್‌ವೀರ್ ಸಿಂಗ್ ಬಜ್ವಾ, ಮೈರಾಜ್ ಅಹ್ಮದ್ ಖಾನ್‌; ಕಾಯ್ದಿರಿಸಿದ ಸ್ಪರ್ಧಿಗಳು: ಗುರುಜೋತ್ ಸಿಂಗ್ ಖಂಗುರ, ಸಿರಾಜ್ ಶೇಖ್‌.

ಮಹಿಳೆಯರು: 10 ಮೀ. ಏರ್ ರೈಫಲ್‌: ಅಪೂರ್ವಿ ಚಾಂಡೇಲ, ಇಳವೆನ್ನಿಲ ವಾಳರಿವನ್‌; ಕಾಯ್ದಿರಿಸಿದ ಸ್ಪರ್ಧಿಗಳು: ಅಂಜುಂ ಮೌದ್ಗಿಲ್‌, ಶ್ರೇಯಾ ಅಗರವಾಲ್‌. 50 ಮೀ. ರೈಫಲ್ ತ್ರಿ ಪೋಸಿಷನ್‌: ಅಂಜುಮ್ ಮೌದ್ಗಿಲ್‌, ತೇಜಸ್ವಿನಿ ಸಾವಂತ್‌; ಕಾಯ್ದಿರಿಸಿದ ಸ್ಪರ್ಧಿಗಳು: ಸುನಿಧಿ ಚೌಹಾನ್‌, ಗಾಯತ್ರಿ ಎನ್‌. 10 ಮೀ. ಏರ್ ಪಿಸ್ತೂಲ್‌: ಮನು ಭಾಕರ್‌, ಯಶಸ್ವಿನಿ ಸಿಂಗ್ ದೇಸ್ವಾಲ್‌; ಕಾಯ್ದಿರಿಸಿದ ಸ್ಪರ್ಧಿಗಳು: ಪಿ.ಶ್ರೀನಿವೇದಾ, ಶ್ವೇತಾ ಸಿಂಗ್‌. 25 ಮೀ. ಸ್ಪೋರ್ಟ್ಸ್ ಪಿಸ್ತೂಲ್‌: ರಾಹಿ ಸರ್ನೋಬತ್‌, ಮನು ಭಾಕರ್; ಕಾಯ್ದಿರಿಸಿದ ಸ್ಪರ್ಧಿಗಳು: ಚಿಂಕಿ ಯಾದವ್‌, ಅಭಿಜ್ಞಾ ಪಾಟೀಲ್‌.

10 ಮೀ. ಏರ್ ರೈಫಲ್ ಮಿಶ್ರ ತಂಡ: ದಿವ್ಯಾಂಶ್ ಸಿಂಗ್ ಪನ್ವರ್‌, ಇಳವೆನ್ನಿಲ ವಾಳರಿವನ್‌, ದೀಪಕ್ ಕುಮಾರ್‌, ಅಂಜುಮ್ ಮೌದ್ಗಿಲ್‌. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ: ಸೌರಭ್ ಚೌಧರಿ, ಮನು ಭಾಕರ್, ಅಭಿಷೇಕ್ ವರ್ಮಾ, ಯಶಸ್ವಿನಿ ಸಿಂಗ್ ದೇಸ್ವಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.