ADVERTISEMENT

ಮಾಸ್ಕ್ ಕಡ್ಡಾಯ; ಹಾಡು, ಕೂಗಾಟಕ್ಕೆ ನಿಷೇಧ

ಟೋಕಿಯೊ ಒಲಿಂಪಿಕ್ಸ್‌: ಕೋವಿಡ್‌–19 ತಡೆ ನಿಯಮಾವಳಿಗಳು

ರಾಯಿಟರ್ಸ್
Published 3 ಫೆಬ್ರುವರಿ 2021, 18:35 IST
Last Updated 3 ಫೆಬ್ರುವರಿ 2021, 18:35 IST

ಟೋಕಿಯೊ: ಊಟ ಮಾಡುವಾಗ, ಮಲಗುವಾಗ ಹೊರತುಪಡಿಸಿ ಎಲ್ಲ ಸಂದರ್ಭದಲ್ಲಿ ಅಥ್ಲೀಟುಗಳು ಮಾಸ್ಕ್ ಧರಿಸುವುದು ಕಡ್ಡಾಯ; ಹಾಡುವಂತಿಲ್ಲ, ಜೋರಾಗಿ ಕೂಗುವಂತಿಲ್ಲ... ಟೋಕಿಯೊ ಒಲಿಂಪಿಕ್ಸ್ ಕೂಟಕ್ಕೆ ಬುಧವಾರ ಅಧಿಕಾರಿಗಳು ಪ್ರಕಟಿಸಿದ ಕೋವಿಡ್‌–19 ತಡೆ ಮಾರ್ಗಸೂಚಿಗಳಲ್ಲಿ ಇವೂ ಸೇರಿವೆ.

ಈ ವರ್ಷದ ಜುಲೈನಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್‌ಗೆ ಅಧಿಕಾರಿಗಳು ನಿಯಮಾವಳಿಗಳನ್ನು ರೂಪಿಸಿದ್ದಾರೆ. ಅಂತರರಾಷ್ಟ್ರೀಯ ಫೆಡರೇಷನ್‌ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಮತಿಯಿಲ್ಲದೆ ಸಾರ್ವಜನಿಕ ಸಾರಿಗೆ ಬಳಸುವಂತಿಲ್ಲ ಎಂಬಿತ್ಯಾದಿ ನಿಯಮಗಳು, ಕೋವಿಡ್–19 ಪಿಡುಗಿನ ವೇಳೆ ಕ್ರೀಡಾಕೂಟ ಆಯೋಜಿಸುವುದನ್ನು ವಿರೋಧಿಸುತ್ತಿರುವ ಜಪಾನ್ ಜನತೆಗೆ ತೃಪ್ತಿ ತಂದಿರುವ ಸಾಧ್ಯತೆಯಿಲ್ಲ.

ಬೇಸಿಗೆ ಕೂಟವು ಈ ಹಿಂದಿನ ಒಲಿಂಪಿಕ್ಸ್‌ಗಳಿಗಿಂತ ಭಿನ್ನವಾಗಿರಲಿದೆ ಎಂದಿರುವ ಅಧಿಕಾರಿಗಳು, ಕೂಟವನ್ನು ಸುರಕ್ಷಿತವಾಗಿ ಆಯೋಜಿಸುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.

ADVERTISEMENT

‘ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರು ಅನುಸರಿಸಬೇಕಾದ ಹಲವು ನಿರ್ಬಂಧಗಳು ಮತ್ತು ಷರತ್ತುಗಳಿವೆ. ಅವುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು‘ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ), ಒಲಿಂಪಿಕ್‌ ಕೂಟದ ಕಾರ್ಯಚಟುವಟಿಕೆಗಳ ನಿರ್ದೇಶಕ ಪಿಯರೆ ಡ್ಯೂಕ್ರೆ ಹೇಳಿದ್ದಾರೆ.

ಇನ್ನಷ್ಟು ನಿಯಮಾವಳಿಗಳನ್ನು ಏಪ್ರಿಲ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌ಅನ್ನು ಕೋವಿಡ್‌ ಹಾವಳಿಯ ಕಾರಣದಿಂದಲೇ ಈ ವರ್ಷದ ಜುಲೈಗೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.