ADVERTISEMENT

ಇಂದು ಮುಂಬೈ ಮ್ಯಾರಥಾನ್‌ಗೆ ಸಚಿನ್ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 21:08 IST
Last Updated 20 ಆಗಸ್ಟ್ 2022, 21:08 IST

ಮುಂಬೈ: ಮಹಾನಗರಿಯಲ್ಲಿ ಭಾನುವಾರ ನಡೆಯಲಿರುವ ಹಾಫ್‌ ಮ್ಯಾರಥಾನ್‌ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಚಾಲನೆ ನೀಡಲಿದ್ದಾರೆ.

ಒಟ್ಟು 13500ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವರು. ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.21.1 ಕಿಲೋ ಮೀಟರ್ಸ್ ಓಟದಲ್ಲಿ 4000, 10 ಕಿಲೋಮೀಟರ್ ಓಟದಲ್ಲಿ 7000 ಮತ್ತು 5 ಕಿಲೋ ಮೀಟರ್ ಓಟದಲ್ಲಿ 2500 ಓಟಗಾರರು ಭಾಗವಹಿಸಲಿದ್ದಾರೆ.

‘ಕೋವಿಡ್ ಮಹಾಮಾರಿ ಆರಂಭಗೊಂಡಾಗಿನಿಂದ ಆರೋಗ್ಯ ನಿರ್ವಹಣೆ ಹಾಗೂ ಫಿಟ್‌ನೆಸ್‌ನತ್ತ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನ ಅರಿತಿದ್ದಾರೆ’ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.