
ಮಂಗಳೂರು: ನಗರದ ಮೊಹಮ್ಮದ್ ಅಬ್ದುಲ್ ಬಾಶಿತ್ ಅವರು ಮಂಗಳೂರು ಸರ್ಫ್ ಕ್ಲಬ್ ಆಯೋಜಸಿದ್ದ ಅಂತರರಾಷ್ಟ್ರೀಯ ಓಪನ್ ಸೀ ಈಜು ಚಾಂಪಿಯನ್‌ಷಿಪ್‌ನ 8 ಕಿಲೊಮೀಟರ್ ಸ್ಪರ್ಧೆಯ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಬೆಂಗಳೂರಿನ ಅಜಯ್ ರಾವ್ ಮತ್ತು ಮೇಘನಾ ಮಯ್ಯ 6 ಕಿಲೊಮೀಟರ್ಸ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಮುಕುಂದ್ ರಿಯಾಲಿಟಿ ಸಹಯೋಗದಲ್ಲಿ ತಣ್ಣೀರುಬಾವಿ ಬೀಚ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅಜಯ್ ರಾವ್ 2 ಗಂಟೆ 33:4ನಿಮಿಷಗಳಲ್ಲಿ ಗುರಿ ಮುಟ್ಟಿದರೆ ಮೇಘನಾ ಮಯ್ಯ 2 ಗಂಟೆ 50:47 ಸೆಕೆಂಡುಗಳಲ್ಲಿ ರೇಸ್ ಮುಗಿಸಿದರು. 8 ಕಿಮೀ ಸ್ಪರ್ಧೆಯನ್ನು ಮೊಹಮ್ಮದ್ ಅಬ್ದುಲ್ ಬಾಶಿತ್ 2 ಗಂಟೆ 14:3 ನಿಮಿಷಗಳಲ್ಲಿ ಪೂರ್ತಿಗೊಳಿಸಿದರು.
ಫಲಿತಾಂಶಗಳು: 8 ಕಿಮೀ: ಮೊಹಮ್ಮದ್ ಅಬ್ದುಲ್ ಬಾಶಿತ್ –1. ಕಾಲ: 2:14:3 ನಿ, ರೋನ್ ಸಿಲ್ವರ್–2 ಪೆರಿ–3; ಪುರುಷರ 6 ಕಿಮೀ: ಅಜಯ್ ರಾವ್–1. ಕಾಲ: 2 ಗಂಟೆ 33:4ನಿ, ಅನಿರ್ಬನ್ ಭೌಮಿಕ್–2, ರಾಹುಲ್ ಛತ್ರಪತಿ–3. ಮಹಿಳೆಯರು: ಮೇಘನಾ ಮಯ್ಯ–1. ಕಾಲ: 2:50:47, ಅವಂತಿಕಾ ಅಕೇರ್‌ಕರ್–2, ರಾಧಿಕಾ ಕೃಷ್ಣ–3; ಪುರುಷರ 4 ಕಿಮೀ: ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ –1. ಕಾಲ: 1:00:04, ಸಾತ್ವಿಕ್ ನಾಯಕ್ ಸುಜೀರ್–2, ಋತಿಕ್ ದರ್ಶನ್–3; ಮಹಿಳೆಯರು: ಶ್ರೀಚರಣಿ ತುಮು–1. ಕಾಲ: 1:2:17, ದಕ್ಷಿಣಾ–2, ತಾನ್ಯ ಎಸ್–3; ಪುರುಷರ 2 ಕಿಮೀ: ದಕ್ಷತ್ ಪ್ರಸಾದ್–1. ಕಾಲ: 34ನಿಮಿಷ 13ಸೆ, ಲಿಖಿತ್ ರಾಮಚಂದ್ರ–2, ಹರ್ಷ ಆರ್–3; ಮಹಿಳೆಯರು: ರಾಧಿಕಾ ಖಾತ–1. ಕಾಲ: 38:56, ದಿಯಾ ನಾಯಕ್–2, ಪ್ರಜ್ಞಾ ಶ್ರೀಕಾಂತ್ ಕೆ–3; ಪುರುಷರ 500 ಮೀ: ಶ್ರಾವತ್ ಪಿ–1. ಕಾಲ:10:09 ನಿಮಿಷ, ಸನ್ನಿಗ್ಧ್ ಉಳ್ಳಾಲ್–2, ತ್ರಿಶಾನ್ ಕೆ–3; ಮಹಿಳೆಯರು: ಚೇತನಾ ಲೋಕನಾಥ್–1. ಕಾಲ:7:20, ಸಾನ್ವಿ ಆರ್–2, ನಿಶ್ಕಾ–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.