
ನವದೆಹಲಿ: ಉದಯೋನ್ಮುಖ ಶೂಟರ್ ಮುಕೇಶ್ ನೇಲವಲ್ಲಿ ಅವರು ಬುಧವಾರ ಇಲ್ಲಿ ಮುಕ್ತಾಯಗೊಂಡ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ತೇಜಸ್ವನಿ ಸಿಂಗ್ ಅವರು ಬೆಳ್ಳಿ ಜಯಿಸಿದರು.
ಜೂನಿಯರ್ ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮುಕೇಶ್ ಅವರು 585 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ವೈಯಕ್ತಿಕ ತಟಸ್ಥ ಅಥ್ಲೀಟ್ (ಎಐಎನ್) ಅಲೆಕ್ಸಾಂಡರ್ ಕೊವಲೆವ್ (577) ರಜತ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಸಾಹಿಲ್ ಚೌಧರಿ (573) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಮಹಿಳೆಯರ ಜೂನಿಯರ್ ವಿಭಾಗದಲ್ಲಿ ತೇಜಸ್ವನಿ (30) ಬೆಳ್ಳಿ ಗೆದ್ದರು. ಎಎನ್‌ಐ ಸ್ಪರ್ಧಿ ಅಲೆಕ್ಸಾಂಡ್ರಾ ಟಿಕೊನೊವಾ (33) ಸ್ವರ್ಣ ಜಯಿಸಿದರೆ, ಇಟಲಿಯ ಅಲೆಸಾಂಡ್ರಾ ಫೇತ್ (28) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ 19 ಪದಕಗಳನ್ನು (6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು) ಗೆದ್ದ ಭಾರತ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಎಎನ್‌ಐ ಸ್ಪರ್ಧಿಗಳು 10 ಪದಕಗಳೊಂದಿಗೆ (4 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು) ಎರಡನೇ ಸ್ಥಾನ ಪಡೆದರು. ತಲಾ 2 ಚಿನ್ನ, ಬೆಳ್ಳಿ ಹಾಗೂ 1 ಕಂಚು ಗೆದ್ದ ಇಟಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.