ADVERTISEMENT

ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್‌ ಚೆಸ್: ಶ್ರೇಯಾಂಕಿತರ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 0:36 IST
Last Updated 7 ಅಕ್ಟೋಬರ್ 2025, 0:36 IST
ಚೆಸ್
ಚೆಸ್   

ಮೈಸೂರು: ನಿವಾನ್ ರಾಘವೇಂದ್ರ ಸೇರಿದಂತೆ ಶ್ರೇಯಾಂಕಿತ ಆಟಗಾರರು ಸೋಮವಾರ ಇಲ್ಲಿ ಆರಂಭಗೊಂಡ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್‌ ಚೆಸ್ ಟೂರ್ನಿ’ಯಲ್ಲಿ ಮುನ್ನಡೆದರು.

ರೋಟರಿ ಮೈಸೂರು ಬೃಂದಾವನ ಹಾಗೂ ಮೈಸೂರು ಚೆಸ್‌ ಕೇಂದ್ರದ ಸಹಯೋಗದಲ್ಲಿ ರೋಟರಿ ಬೃಂದಾವನ ಶಾಲೆ ಆವರಣದಲ್ಲಿ ನಡೆದ ಟೂರ್ನಿಯ ಮೊದಲ ಸುತ್ತಿನಲ್ಲಿ ಎಂ.ಎಸ್. ಗೌತಮ್‌ ಕುಮಾರ್ ಎದುರು ಗೆಲುವು ಸಾಧಿಸಿದ ನಿವಾನ್‌, ಎರಡನೇ ಸುತ್ತಿನಲ್ಲಿ ಎಸ್. ಭವಿಷ್‌ರನ್ನು ಮಣಿಸಿದರು.

ಪ್ರಮುಖ್‌ ಜಲ್ಮಾರ್, ಬಿ. ಯುವನಾಯಕ್‌, ಸಾತ್ವಿಕ್ ವಿಶ್ವನಾಥ್‌ ಸೇರಿದಂತೆ ಒಟ್ಟು 24 ಆಟಗಾರರು ಎರಡೂ ಸುತ್ತುಗಳಲ್ಲೂ ಗೆಲ್ಲುವ ಮೂಲಕ ತಲಾ 2 ಅಂಕ ಸಂಪಾದಿಸಿದರು.

ADVERTISEMENT

ವಿವಿಧ ರಾಜ್ಯಗಳ 118 ಚೆಸ್‌ಪಟುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ವಿಜೇತರು ಒಟ್ಟು ₹ 2 ಲಕ್ಷ ಮೊತ್ತದ ಬಹುಮಾನ ಜೇಬಿಗೆ ಇಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.