ADVERTISEMENT

ಅಥ್ಲಿಟಿಕ್ಸ್‌: ನಾಗಿನಿಗೆ ಬೆಳ್ಳಿ ಪದಕ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:12 IST
Last Updated 14 ಅಕ್ಟೋಬರ್ 2025, 16:12 IST
ಬೆಳ್ಳಿ ಪದಕ ಗೆದ್ದ ನಾಗಿನಿ
ಬೆಳ್ಳಿ ಪದಕ ಗೆದ್ದ ನಾಗಿನಿ   

ಬೆಂಗಳೂರು: ಕರ್ನಾಟಕದ ನಾಗಿನಿ ಅವರು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಮಂಗಳವಾರ ಬೆಳ್ಳಿ ಪದಕ ಗೆದ್ದರು.

18 ವರ್ಷದೊಳಗಿನ ಮಹಿಳೆಯರ 1000 ಮೀಟರ್‌ ಓಟದಲ್ಲಿ 2 ನಿಮಿಷ 52.26 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ನಾಗಿನಿ ಎರಡನೇ ಸ್ಥಾನ ಪಡೆದರು. ಹರಿಯಾಣದ ಹೀನಾ (2:50.69ಸೆ) ಚಿನ್ನದ ಪದಕ ಗೆದ್ದರು.

20 ವರ್ಷದೊಳಗಿನ ಮಹಿಳೆಯರ 4x400 ಮೀಟರ್‌ ರಿಲೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡವು ಕಂಚಿನ ಪದಕ ತಮ್ಮದಾಗಿಸಿಕೊಂಡಿತು. ಎರಡನೇ ಸ್ಥಾನ ಪಡೆದಿದ್ದ ಪಂಜಾಬ್ ಮತ್ತು ಮೂರನೇ ಸ್ಥಾನ ಪಡೆದಿದ್ದ ಕೇರಳ ತಂಡಗಳು ಲೇನ್ ಉಲ್ಲಂಘನೆಗಾಗಿ ಅನರ್ಹಗೊಂಡ ನಂತರ ಕರ್ನಾಟಕಕ್ಕೆ ಈ ಪದಕ ಒಲಿಯಿತು. 

ADVERTISEMENT

ವೈಷ್ಣವಿ ರಾವಲ್‌, ಇಶಾ ರೆಂಜಿತ್, ಗೀತಾ ಚೌಕಾಶಿ ಮತ್ತು ಸಾನಿಯಾ ಮೌಲಾಲಿ ಅವರಿದ್ದ ತಂಡವು 3 ನಿಮಿಷ 59.93 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ದೆಹಲಿ ತಂಡ (3:55.39ಸೆ) ಮತ್ತು ತಮಿಳುನಾಡು ತಂಡ (3:43.87ಸೆ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡವು.

ಐದು ದಿನಗಳ ಕೂಟದಲ್ಲಿ ವೈಷ್ಣವಿ ಅವರಿಗೆ ಇದು ಮೂರನೇ ಪದಕವಾಗಿದೆ. 20 ವರ್ಷದೊಳಗಿನ 800 ಮೀಟರ್ ಮತ್ತು 1500 ಮೀಟರ್ ಓಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.