ಝೂಲ್ (ಜರ್ಮನಿ): ಹದಿಹರೆಯದ ಸ್ಪರ್ಧಿ ನಾರಾಯಣ್ ಪ್ರಣವ್, ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಕಪ್‌ನಲ್ಲಿ ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಭಾರತಕ್ಕೆ ಈ ಕೂಟದಲ್ಲಿ ಐದನೇ ಪದಕವಾಗಿದೆ.
ಖೇಲೊ ಇಂಡಿಯಾ ಯೂತ್ ಗೇಮ್ಸ್ ಚಾಂಪಿಯನ್ ಆಗಿರುವ ಪ್ರಣವ್ ಫೈನಲ್‌ನಲ್ಲಿ 227.9 ಪಾಯಿಂಟ್ಸ್ ಕಲೆಹಾಕಿದರು. ಅಮೆರಿಕದ ಬ್ರಾಡನ್ ಪೀಸರ್ (250.0) ಬೆಳ್ಳಿ ಗೆದ್ದರೆ, ಚೀನಾದ ಹುವಾಂಗ್ ಲಿವಾನ್ಲಿನ್ (250.3) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಕ್ರೀಡೆಯಲ್ಲಿ ವಿರಳ ಎನ್ನುವಂತೆ ಎಡಗೈನಲ್ಲಿ ಶೂಟ್ ಮಾಡುವ ಪೀಸರ್ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. ಹುವಾಂಗ್ ಜೂನಿಯರ್ ಎಷ್ಯನ್ ಚಾಂಪಿಯನ್ ಆಗಿದ್ದು, 3 ಪೊಸಿಷನ್ ಚಿನ್ನ ವಿಜೇತ ರೊಮೇನ್ ಅಫ್ರೇರ್ ಕೂಡ ಕಣದಲ್ಲಿದ್ದ ಕಾರಣ ಪ್ರಣವ್ ಅವರಿಗೆ ಫೈನಲ್ ಸುಲಭವಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.