ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟ ಆರಂಭವಾದ ದಿನದಿಂದಲೂ ಪದಕಗಳ ಬೇಟೆ ಆಡಿದ ಕರ್ನಾಟಕದ ಈಜುಪಟುಗಳಾದ ಶ್ರೀಹರಿ ನಟರಾಜ್ ಮತ್ತು ಧೀನಿಧಿ ದೇಸಿಂಗು ಅವರು ಈಜುಕೂಟದ ಕೊನೆಯ ದಿನವೂ ಪಾರಮ್ಯ ಮೆರೆದರು. ಇದರೊಂದಿಗೆ ಈಜು ವಿಭಾಗದಲ್ಲಿ ಕರ್ನಾಟಕವು 22 ಚಿನ್ನದ ಪದಕ ಜಯಿಸಿದವು.
ಉತ್ತರಾಖಂಡದ ಹಲ್ದ್ವಾನಿಯ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆದ ಈಜಿನಲ್ಲಿ ಒಲಿಂಪಿಯನ್ ಶ್ರೀಹರಿ ಅವರು ಪುರುಷರ 100 ಮೀಟರ್ಸ್ ಫ್ರೀಸ್ಟೈಲ್ ರೇಸ್‌ನಲ್ಲಿ 50.65 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಅವರಿಗೆ ನಿಕಟ ಪೈಪೋಟಿ ನೀಡಿದ ಮಹಾರಾಷ್ಟ್ರದ ಹೀರ್ ಗಿತೇಶ್ ಶಾ (51.61ಸೆ) ಮತ್ತು ರಿಷಭ್ ದಾಸ್ (51.71ಸೆ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
ಮಹಿಳೆಯರ ವಿಭಾಗದಲ್ಲಿ 14 ವರ್ಷ ವಯಸ್ಸಿನ ಒಲಿಂಪಿಯನ್ ಧೀನಿಧಿ ತಮ್ಮ ಕೊರಳಿಗೆ ಮತ್ತೊಂದು ಚಿನ್ನದ ಪದಕ ಹಾಕಿಕೊಂಡರು. ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಹೋದ ವರ್ಷ ಗೋವಾದಲ್ಲಿ ನಡೆದಿದ್ದ ಕೂಟದಲ್ಲಿ ಧೀನಿಧಿ ಅವರು (57.7ಸೆ) ದಾಖಲೆ ಮಾಡಿದ್ದರು.
ಪುರುಷರ 100 ಮೀಟರ್ಸ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ವಿದಿತ್ ಎಸ್ ಶಂಕರ್ ಅವರು 1ನಿ, 03.97 ಸೆಕೆಂಡು ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರು.
ಫಲಿತಾಂಶಗಳು: ಪುರುಷರು: 100 ಮೀ ಫ್ರೀಸ್ಟೈಲ್: ಶ್ರೀಹರಿ ನಟರಾಜ್ (ಕರ್ನಾಟಕ; 50.65ಸೆ)–1, ಹೀರ್ ಗಿತೇಶ್ ಶಾ (ಮಹಾರಾಷ್ಟ್ರ)–2, ರಿಷಭ್ ದಾಸ್ (ಮಹಾರಾಷ್ಟ್ರ)–3
100 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಎಸ್ ಶಂಕರ್ (ಕರ್ನಾಟಕ; 1ನಿ,03.97ಸೆ)–1, ಎಸ್. ಧನುಷ್ (ತಮಿಳುನಾಡು)–2, ರಾಣಾ ಪ್ರತಾಪ್ (ಜಾರ್ಖಂಡ್)–3.
ಮಹಿಳೆಯರು: 100 ಮೀ ಫ್ರೀಸ್ಟೈಲ್: ಧೀನಿಧಿ ದೇಸಿಂಗು (ಕರ್ನಾಟಕ; ಹೊಸದಾಖಲೆ: 57.34ಸೆ. ಹಳೆಯದು: 57.87ಸೆ–ಧೀನಿಧಿ ದೇಸಿಂಗು)–1, ತಿತೀಕ್ಷಾ ರಾವತ್ (ದೆಹಲಿ)–2, ಅದಿತಿ ಸತೀಶ್ ಹೆಗಡೆ (ಮಹಾರಾಷ್ಟ್ರ)–3.
100 ಮೀ ಬ್ರೆಸ್ಟ್‌ಸ್ಟ್ರೋಕ್: ಹರ್ಷಿತಾ ಜಯರಾಮ್ (ಕೇರಳ; 1ನಿ,14.34ಸೆ)–1, ಸಾನ್ವಿ ದೇಶ್ವಾಲ್ (ಮಹಾರಾಷ್ಟ್ರ )–2, ಜ್ಯೋತಿ ಪಾಟೀಲ (ಮಹಾರಾಷ್ಟ್ರ)–3
4X100 ಮೀ. ಮಿಶ್ರ ಮೆಡ್ಲೆ: ಕರ್ನಾಟಕ (ಶ್ರೀಹರಿ ನಟರಾಜ್, ವಿದಿತ್ ಎಸ್. ಶಂಕರ್, ನೈಶಾ ಶೆಟ್ಟಿ, ಧೀನಿಧಿ ದೇಸಿಂಗು; 4ನಿ,03.91ಸೆ)–1, ತಮಿಳುನಾಡು–2, ಮಹಾರಾಷ್ಟ್ರ –3.
ವಾಟರ್‌ಪೋಲೊ: ಪುರುಷರು: ಫೈನಲ್: ಎಸ್‌ಎಸ್‌ಸಿಬಿಯು 10–9ರಿಂದ ಮಹಾರಾಷ್ಟ್ರ ಎದುರು ಜಯಿಸಿತು.
ಮೂರನೇ ಸ್ಥಾನ: ಕೇರಳ ತಂಡವು 15–14ರಿಂದ ಬಂಗಾಳ ವಿರುದ್ಧ ಗೆದ್ದಿತು.
ಮಹಿಳೆಯರು: ಫೈನಲ್: ಕೇರಳ ತಂಡವು 11–7ರಿಂದ ಮಹಾರಾಷ್ಟ್ರ ಎದುರು ಗೆದ್ದಿತು.
ಮೂರನೇ ಸ್ಥಾನ: ಪಶ್ಚಿಮ ಬಂಗಾಳ ತಂಡವು 11–3ರಿಂದ ಕರ್ನಾಟಕದ ಎದುರು ಜಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.