ADVERTISEMENT

ಮಾಜಿ ಅಥ್ಲೀಟ್ ನತಾಶಾ ಸಾಗರ್ ನಿಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:25 IST
Last Updated 20 ನವೆಂಬರ್ 2025, 0:25 IST
ನತಾಶಾ ಸಾಗರ್
ನತಾಶಾ ಸಾಗರ್   

ಬೆಂಗಳೂರು: ಜೂನಿಯರ್ ಅಥ್ಲೆಟಿಕ್ಸ್‌ ವಿಭಾಗದ ಮಾಜಿ ಅಥ್ಲೀಟ್ ನತಾಶಾ ಸಾಗರ್ (36) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ನಿಧನರಾದರು. 

ದಯಾನಂದ ಸಾಗರ್ ಶಿಕ್ಷಣ ಸಮೂಹದ ಕುಲಪತಿ ಡಾ. ಡಿ ಹೇಮಚಂದ್ರ ಸಾಗರ್ ಮತ್ತು ಗೀತಾ ಎಚ್‌. ಸಾಗರ್ ಅವರ ಪುತ್ರಿ ನತಾಶಾ ಅವರು 2003 ರಿಂದ 2007ರಲ್ಲಿ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದವರು. 

2003ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ 14 ವರ್ಷದೊಳಗಿನವರ ರಾಷ್ಟ್ರೀಯ ಜೂನಿಯರ್ ಟ್ರಯಥ್ಲಾನ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಲಾಂಗ್‌ ಜಂಪ್, ಹೈಜಂಪ್, ಟ್ರಿಪಲ್ ಜಂಪ್, 100 ಮೀ. ಹರ್ಡಲ್ಸ್‌ ಮತ್ತು ಪೆಂಟಾಥ್ಲಾನ್‌ನಲ್ಲಿ ಅವರು ಪದಕಗಳನ್ನು ಗೆದ್ದಿದ್ದರು.  

ADVERTISEMENT

‘ನತಾಶಾಳನ್ನು 800 ಮೀ ಓಟಗಾರ್ತಿಯನ್ನಾಗಿ ರೂಪಿಸುವ ಆಸೆ ಅವರ ತಾಯಿಗೆ ಇತ್ತು. ಆದರೆ  ಆ ಹುಡುಗಿಯ ಸಾಮರ್ಥ್ಯವನ್ನು ನೋಡಿ ಜಿಗಿತದ ತರಬೇತಿ ನೀಡಲು ನಿರ್ಧರಿಸಿದೆ. ಸ್ನೇಹಮಯಿಯಾಗಿದ್ದ ಹುಡುಗಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ನಿಧನರಾಗಿರುವ ಸುದ್ದಿಯನ್ನು ನಂಬಲಾಗುತ್ತಿಲ್ಲ’ ಎಂದು ಹಿರಿಯ ಅಥ್ಲೆಟಿಕ್ ಕೋಚ್ ಬೀಡು ಹೇಳಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನತಾಶಾ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಬೀಡು ತರಬೇತಿ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.