ಈಜು (ಸಾಂದರ್ಭಿಕ ಚಿತ್ರ)
ಬೆಂಗಳೂರು: ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ 41ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್ ಮತ್ತು 51ನೇ ಜೂನಿಯರ್ ರಾಷ್ಟ್ರೀಯ ಅಕ್ವೆಟಿಕ್ (ವಾಟರ್ ಪೋಲೊ ಮತ್ತು ಡೈವಿಂಗ್) ಚಾಂಪಿಯನ್‌ಷಿಪ್ ಬೆಂಗಳೂರಿನಲ್ಲಿ ಆಗಸ್ಟ್ ಆರಂಭದಲ್ಲಿ ನಡೆಯಲಿದೆ. ಈ ಎರಡು ಕೂಟಗಳಲ್ಲಿ 800ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಬಸವನಗುಡಿ ಈಜು ಕೇಂದ್ರದಲ್ಲಿ ಆಗಸ್ಟ್ 4 ಮತ್ತು 5ರಂದು ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್ ನಡೆಯಲಿದೆ.
ಆಗಸ್ಟ್ 4 ರಿಂದ 8ರವರೆಗೆ ಜೂನಿಯರ್ ವಾಟರ್ ಪೋಲೊ ಮತ್ತು ಡೈವಿಂಗ್ ಸ್ಪರ್ಧೆಗಳು ನಡೆಯಲಿವೆ. ಡೈವಿಂಗ್ ಸ್ಪರ್ಧೆಗಳು ಹಲಸೂರಿನ ಕೆನ್ಸಿಂಗ್‌ಟನ್ ಈಜು ಕೊಳದಲ್ಲಿ, ವಾಟರ್ ಪೋಲೊ ಸ್ಪರ್ಧೆಗಳು ಬಸವನಗುಡಿಯ ಈಜುಕೊಳದಲ್ಲಿ ನಡೆಯಲಿವೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.