ADVERTISEMENT

ರಾಷ್ಟ್ರೀಯ ಕರಾಟೆ: ಚಿನ್ನ ಗೆದ್ದ ಕೆಂಗಾಪುರದ ತನುಜಾ

ಕ್ಯುಡೊ ರಾಷ್ಟ್ರೀಯ ಕರಾಟೆ ಟೂರ್ನಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:39 IST
Last Updated 12 ಸೆಪ್ಟೆಂಬರ್ 2021, 17:39 IST
ತನುಜಾ
ತನುಜಾ   

ಬಸವಾಪಟ್ಟಣ (ದಾವಣಗೆರೆ ಜಿಲ್ಲೆ): ಹಿಮಾಚಲಪ್ರದೇಶದ ಸೋಲಾನ್‌ ನಗರದಲ್ಲಿ ಈಚೆಗೆ ನಡೆದ ಕ್ಯುಡೊ ರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಸಮೀಪದ ಕೆಂಗಾಪುರದ ಆರ್‌.ಎಸ್‌. ತನುಜಾ ಚಿನ್ನದ ಪದಕ ಗಳಿಸಿದ್ದಾರೆ. ಇವರು ಶಿಕ್ಷಕ ಎಚ್‌.ಆರ್‌. ಸತೀಶ್‌ ಮತ್ತು ಕವಿತಾ ದಂಪತಿಯ ಪುತ್ರಿ.

ಮೂರು ವರ್ಷ ದಿಡಗೂರ್‌ ಅಂಬೇಡ್ಕರ್‌ ಅವರಿಂದ ತರಬೇತಿ ಪಡೆದ ತನುಜಾ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.

‘ಕೆಂಗಾಪುರದ ರಾಮಲಿಂಗೇಶ್ವರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ತನುಜ ವೈದ್ಯೆಯಾಗಿ ಗ್ರಾಮೀಣ ಜನರ ಸೇವೆ ಮಾಡುವ ಆಸೆ ಹೊಂದಿದ್ದಾರೆ’ ಎಂದು ಅಂಬೇಡ್ಕರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.