ADVERTISEMENT

ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 31 ಮೇ 2022, 12:27 IST
Last Updated 31 ಮೇ 2022, 12:27 IST

ಮಂಡ್ಯ: ರೈತ ನಾಯಕ, ಮಾಜಿ ಶಾಸಕ ದಿ.ಕೆ.ಎಸ್‌.ಪುಟ್ಟಣ್ಣಯ್ಯ ಸ್ಮರಣೆಯಲ್ಲಿ ಜೂನ್‌ 2ರಿಂದ 4 ದಿನಗಳ ಕಾಲ ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಖಿಲಭಾರತ ಪುರುಷರ ಹೊನಲು–ಬೆಳಕಿನ ಕೊಕ್ಕೊ ಟೂರ್ನಿ ನಡೆಯಲಿದೆ.

ಭಾರತೀಯ ಕೊಕ್ಕೊ ಫೆಡರೇಷನ್‌, ರಾಜ್ಯ ಕೊಕ್ಕೊ ಅಸೋಸಿಯೇಷನ್‌, ಜಿಲ್ಲಾ ಕೊಕ್ಕೊ ಸಂಸ್ಥೆ ಹಾಗೂ ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದ ವತಿಯಿಂದ ಪಂದ್ಯಾವಳಿ ಆಯೋಜನೆಗೊಂಡಿದೆ. ದೇಶದ ಪ್ರಮುಖ 11 ವೃತ್ತಿಪರ ಕೊಕ್ಕೊ ತಂಡಗಳು ಭಾಗವಹಿಸಲಿದ್ದು ಲೀಗ್‌ ಮತ್ತು ನಾಕೌಟ್‌ ಮಾದಿಯಲ್ಲಿ ಟೂರ್ನಿ ನಡೆಯಲಿದೆ. ಮ್ಯಾಟ್‌ ಅಂಕಣದಲ್ಲಿ ಪಂದ್ಯ ನಡೆಯಲಿದ್ದು ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.

ಟೂರ್ನಿಯಲ್ಲಿ ಪ್ರಥಮ ಬಹುಮಾನ ಗಳಿಸಿದ ತಂಡಕ್ಕೆ ₹ 1 ಲಕ್ಷ, 2ನೇ ಬಹುಮಾನ ಗಳಿಸಿದ ತಂಡಕ್ಕೆ ₹ 50 ಸಾವಿರ, 3ನೇ ಬಹುಮಾನ ₹ 30 ಸಾವಿರ, 4ನೇ ಬಹುಮಾನ ₹ 20 ಸಾವಿರ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಗುವುದು. ವೈಯಕ್ತಿಯ ವಿಭಾಗದಲ್ಲಿ ಆಟಗಾರರಿಗೆ ವಿವಿಧ ಬಹುಮಾನಗಳು ದೊರೆಯಲಿವೆ. ಜೂನ್‌ 2ರಂದು ಸಂಜೆ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಟೂರ್ನಿಗೆ ಚಾಲನೆ ನಿಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.