ADVERTISEMENT

ಶಿಲಾರೋಹಣ: ಅಮೀರಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 20:22 IST
Last Updated 31 ಡಿಸೆಂಬರ್ 2025, 20:22 IST
ಪದಕದೊಂದಿಗೆ (ಎಡದಿಂದ) ಸಾವಿತ್ರಿ ಸಮದ್‌, ಅಮೀರಾ ಖೋಸಲಾ ಹಾಗೂ ಗುಂತಾಸ್‌ ಕೌರ್‌ ಚಾಬಡಾ
ಪದಕದೊಂದಿಗೆ (ಎಡದಿಂದ) ಸಾವಿತ್ರಿ ಸಮದ್‌, ಅಮೀರಾ ಖೋಸಲಾ ಹಾಗೂ ಗುಂತಾಸ್‌ ಕೌರ್‌ ಚಾಬಡಾ   

ಬೆಂಗಳೂರು: ದೆಹಲಿಯ ಅಮೀರಾ ಖೋಸಲಾ ಅವರು ಇಲ್ಲಿನ ‘ಯವನಿಕಾ’ದಲ್ಲಿ ಈಚೆಗೆ ನಡೆದ 29ನೇ ರಾಷ್ಟ್ರೀಯ ಕ್ರೀಡಾ ಆರೋಹಣ (ಸ್ಪೋರ್ಟ್‌ ಕ್ಲೈಂಬಿಂಗ್‌) ಚಾಂಪಿಯನ್‌ಷಿಪ್‌ನ ಜೂನಿಯರ್‌ ಬಾಲಕಿಯರ ಶಿಲಾರೋಹಣ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಉತ್ತರ ವಲಯವನ್ನು ಪ್ರತಿನಿಧಿಸಿದ್ದ ಅವರು 83.8 ಪಾಯಿಂಟ್ಸ್‌ ಪಡೆದರು.

ಪೂರ್ವ ವಲಯದ ಸಾವಿತ್ರಿ ಸಮದ್‌ ಅವರು 50 ಪಾಯಿಂಟ್ಸ್‌ಗಳೊಡನೆ ಬೆಳ್ಳಿ ಪದಕ ಜಯಿಸಿದರು. ಉತ್ತರ ವಲಯದ ಗುಂತಾಸ್‌ ಕೌರ್‌ ಚಾಬಡಾ (24.8) ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಈ ಚಾಂಪಿಯನ್‌ಷಿಪ್‌ ಅನ್ನು ಆಯೋಜಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.