
ಪ್ರಶಸ್ತಿ ಗೆದ್ದ ಕರ್ನಾಟಕದ ಪುರುಷರ ಥ್ರೋಬಾಲ್ ತಂಡ.
ಬೆಂಗಳೂರು: ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡಗಳು ಮಧ್ಯಪ್ರದೇಶದ ಭಾನಾಪುರದಲ್ಲಿ ಭಾನುವಾರ ಮುಕ್ತಾಯಗೊಂಡ 46ನೇ ಸೀನಿಯರ್ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.
ರಾಜ್ಯದ ಪುರುಷರ ತಂಡವು ಫೈನಲ್ ಹಣಾಹಣಿಯಲ್ಲಿ 25–14, 25–21ರಿಂದ ಮಧ್ಯಪ್ರದೇಶ ತಂಡವನ್ನು ಮಣಿಸಿತು. ರೋಚಕವಾಗಿದ್ದ ಈ ಪಂದ್ಯದಲ್ಲಿ ನಾಯಕ ನಾಗರಾಜ್, ಪ್ರೀತಂ, ಎಡಗೈ ಆಟಗಾರ ಅಜಯ್, ರಾಕೇಶ್ ಅವರು ಕರ್ನಾಟಕದ ಗೆಲುವಿನಲ್ಲಿ ಮಿಂಚಿದರು.
ಮಧ್ಯಪ್ರದೇಶ ತಂಡವು ರನ್ನರ್ಸ್ ಅಪ್ ಆದರೆ, ಆಂಧ್ರಪ್ರದೇಶ ತಂಡ ತೃತೀಯ ಮತ್ತು ದೆಹಲಿ ತಂಡವು ಚತುರ್ಥ ಸ್ಥಾನಗಳನ್ನು ಪಡೆದವು.
ರಾಜ್ಯದ ಮಹಿಳೆಯರ ತಂಡವು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 25–14, 25–12ರಿಂದ ಆಂಧ್ರಪ್ರದೇಶ ತಂಡವನ್ನು ಮಣಿಸಿತು. ತೆಲಂಗಾಣ ಮತ್ತು ಆತಿಥೇಯ ಮಧ್ಯಪ್ರದೇಶ ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಗಳಿಸಿದವು.
ನಾಲ್ಕು ದಿನ ನಡೆದ ಚಾಂಪಿಯನ್‌ಷಿಪ್‌ನಲ್ಲಿ 21 ರಾಜ್ಯಗಳಿಂದ 35 ತಂಡಗಳು ಸ್ಪರ್ಧಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.