ADVERTISEMENT

ನೀರಜ್ ಚೋಪ್ರಾಗೆ ತೀವ್ರ ಜ್ವರ: ಕಾರ್ಯಕ್ರಮಗಳಿಂದ ದೂರ

ಪಿಟಿಐ
Published 14 ಆಗಸ್ಟ್ 2021, 13:50 IST
Last Updated 14 ಆಗಸ್ಟ್ 2021, 13:50 IST
ನೀರಜ್ ಚೋಪ್ರಾ– ಪಿಟಿಐ ಚಿತ್ರ
ನೀರಜ್ ಚೋಪ್ರಾ– ಪಿಟಿಐ ಚಿತ್ರ   

ನವದೆಹಲಿ : ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೊ ಪಟು ಭಾರತದ ನೀರಜ್ ಚೋಪ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಟೋಕಿಯೊ ಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿ ತವರಿಗೆ ಮರಳಿದ ಬಳಿಕ ಅವರಿಗೆ ಜ್ವರ ಬಾಧಿಸಿದೆ. ಅವರು ಕೋವಿಡ್‌ ಟೆಸ್ಟ್ ಮಾಡಿಸಿಕೊಂಡಿದ್ದು ವರದಿ ‘ನೆಗೆಟಿವ್’ ಬಂದಿದೆ.

23 ವರ್ಷದ ನೀರಜ್, ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎನಿಸಿಕೊಂಡಿದ್ದರು.

‘ನೀರಜ್ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಸದ್ಯಕ್ಕೆ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿಲ್ಲ‘ ಎಂದು ಮೂಲಗಳು ತಿಳಿಸಿವೆ.

ADVERTISEMENT

ನೀರಜ್ ಸೇರಿದಂತೆ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಎಲ್ಲರನ್ನೂ ಸರ್ಕಾರ ಸೋಮವಾರ ಸನ್ಮಾನಿಸಿತ್ತು. ಮರುದಿನ ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಕೂಡ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು.

ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಹಮ್ಮಿಕೊಂಡಿದ್ದ ಎರಡೂ ಕಾರ್ಯಕ್ರಮಗಳಲ್ಲಿ ನೀರಜ್‌ ಭಾಗವಹಿಸಿರಲಿಲ್ಲ. ಭಾರತ ಒಲಿಂಪಿಕ್ ಸಂಸ್ಥೆಯುಭಾನುವಾರ ಆಯೋಜಿಸಿರುವ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೊ ಇಲ್ಲವೊ ಎಂಬುದು ಗೊತ್ತಾಗಿಲ್ಲ.

ನೀರಜ್ ಅವರು ಸದ್ಯ ತಮ್ಮ ಊರು ಖಂಡ್ರಾಗೆ ಬರುತ್ತಿದ್ದಾರೆ ಎಂದು ಅವರ ಚಿಕ್ಕಪ್ಪ ಭೀಮ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.