ADVERTISEMENT

ನೆಟ್‌ಬಾಲ್‌: ಆಯ್ಕೆ ಟ್ರಯಲ್ಸ್‌ ನಾಳೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 23:37 IST
Last Updated 16 ಮೇ 2025, 23:37 IST
<div class="paragraphs"><p>ನೆಟ್‌ಬಾಲ್‌&nbsp;&nbsp;</p></div>

ನೆಟ್‌ಬಾಲ್‌  

   

ಬೆಂಗಳೂರು: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ 31ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಹಾಗೂ ಇತರ ಟೂರ್ನಿಗಳಿಗೆ ರಾಜ್ಯ ತಂಡದ ಆಯ್ಕೆಗಾಗಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ 18ರಂದು ಬೆಳಿಗ್ಗೆ 8ರಿಂದ ಟ್ರಯಲ್ಸ್‌ ಆಯೋಜಿಸಲಾಗಿದೆ.

ಇದೇ 25ರಿಂದ 28ರವರೆಗೆ ಸಬ್‌ ಜೂನಿಯರ್‌ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ (ಬಾಲಕ–ಬಾಲಕಿಯರು), 28ರಿಂದ 30ರವರೆಗೆ ಫಾಸ್ಟ್‌5 ಸಬ್‌ ಜೂನಿಯರ್‌ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ (ಬಾಲಕ– ಬಾಲಕಿಯರು), 29ರಿಂದ 31ರವರೆಗೆ ಸಬ್‌ ಜೂನಿಯರ್‌ ರಾಷ್ಟ್ರೀಯ ಮಿಶ್ರ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ (ಬಾಲಕ–ಬಾಲಕಿಯರು) ನಡೆಯಲಿದೆ.

ADVERTISEMENT

ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆ ಮತ್ತು ರಾಷ್ಟ್ರೀಯ ನೆಟ್‌ಬಾಲ್‌ ಫೆಡರೇಷನ್‌ನಲ್ಲಿ ನೋಂದಣಿಯಾಗಿರುವ ಆಟಗಾರರು ಜಿಲ್ಲಾ ಸಂಸ್ಥೆಯ ಪತ್ರದೊಂದಿಗೆ ಟ್ರಯಲ್ಸ್‌ಗೆ ಹಾಜರಾಗಬೇಕು. 2009 ಮೇ 17ರ ನಂತರ ಜನಿಸಿದವರು ಅರ್ಹರಾಗಿರುತ್ತಾರೆ. ಮಾಹಿತಿಗೆ ಪುರುಷೋತ್ತಮ್‌: 91640 68238.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.