
ಬೆಂಗಳೂರು: ರೋಚಕತೆಯ ಅಲೆಗಳನ್ನೆಬ್ಬಿಸಿದ ‘ಸ್ಕಿನ್ಸ್’ ಸ್ಪರ್ಧೆಯಲ್ಲಿ ಯುವಪ್ರತಿಭೆ ಚಿಂತನ್ ಎಸ್ ಶೆಟ್ಟಿ ಅವರು ಒಲಿಂಪಿಯನ್ ಶ್ರೀಹರಿ ನಟರಾಜ್ ಅವರನ್ನು ಕೂದಲೆಳೆಯ ಅಂತರದಲ್ಲಿ ಹಿಂದಿಕ್ಕಿ ಚಿನ್ನ ಗಳಿಸಿದರು.
ಶುಕ್ರವಾರ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್‌ನಲ್ಲಿ ಆರಂಭವಾದ ನಾಲ್ಕನೇ ಆವೃತ್ತಿಯ ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ ಯಲ್ಲಿ ಲಕ್ಷ್ಯನ್ ಅಕಾಡೆಮಿಯ 17 ವರ್ಷದ ಚಿಂತನ್ 25.16 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಸ್ಕಿನ್ಸ್ (25 ಮೀಟರ್ ಪೂಲ್‌ನಲ್ಲಿ ನಡೆಯುವ ಮೂರು ಸುತ್ತುಗಳ ಫೈನಲ್‌ನಲ್ಲಿ ಎಂಟು ಸ್ಪರ್ಧಿಗಳ ಪೈಪೋಟಿ) ವಿಭಾಗದಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನ ಶ್ರೀಹರಿ (25.49ಸೆ) ಬೆಳ್ಳಿ ಪಡೆದರು. ಬಸವನಗುಡಿ ಅಕ್ವಾಟೆಕ್ಸ್‌ನ ಎಸ್. ದರ್ಶನ್ (26.13ಸೆ) ಕಂಚು ಗೆದ್ದರು.
ಮಹಿಳೆಯರ ವಿಭಾಗದಲ್ಲಿ ರುತುಜಾ ರಾಜಧನ್ಯ (29.53ಸೆ) ಚಿನ್ನ ಜಯಿಸಿದರು. ಸ್ವಿಮ್‌ಲೈಫ್ ನ ನೈಶಾ ಶೆಟ್ಟಿ (29.59ಸೆ) ಮತ್ತು ಹಷಿಕಾ ರಾಮಚಂದ್ರ (29.74ಸೆ) ಕ್ರಮವಾಗಿ ಬೆಳ್ಳಿಹಾಗೂ ಕಂಚು ಪಡೆದರು.
ಪುರುಷರು: 50 ಮೀ. ಬಟರ್‌ಫ್ಲೈ: ಶ್ರೀಹರಿ ನಟರಾಜ್ (ಡಾಲ್ಫಿನ್)–1, ಚಿಂತನ್ ಎಸ್.ಶೆಟ್ಟಿ (ಲಕ್ಷ್ಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್)–2, ಪ್ರಥಮ್ ಶರ್ಮಾ (ಡಾಲ್ಫಿನ್)–3, ಕಾಲ: 25.06 ಸೆ.; 100 ಮೀ. ಬಟರ್‌ಫ್ಲೈ: ಚಿಂತನ್ ಎಸ್. ಶೆಟ್ಟಿ –1, ಪ್ರಥಮ್ ಶರ್ಮಾ –2, ಲಕ್ಷ್ಯ ವಶಿಷ್ಟ್ (ಬುಲ್‌ಬ್ಲಾಸ್ಟಿ ಅಕ್ವೆಟಿಕ್ಸ್–3, ಕಾಲ: 57.72 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಆಕಾಶ್ ಮಣಿ (ಬಿಎಸಿ)–1, ನಿತಿಕ್ ನಥೆಲ್ಲಾ (ಬಿಎಸಿ)–2, ಜತಿನ್ ಬಿ (ಗ್ಲೋಬಲ್)–3, 58.84 ಸೆ.; 100 ಮೀ. ಮೆಡ್ಲೆ: ಶ್ರೀಹರಿ ನಟರಾಜ್ (ಡಾಲ್ಫಿನ್)–1, ವಿದಿತ್ ಎಸ್. ಶಂಕರ್ (ಡಾಲ್ಫಿನ್)–2, ಸೂರ್ಯ ಜೋಯಪ್ಪ (ಬಿಎಸಿ)–3, ಕಾಲ: 57.53ಸೆ.
ಮಹಿಳೆಯರು: 50 ಮೀ. ಬಟರ್‌ಫ್ಲೈ: ನೀನಾ ವೆಂಕಟೇಶ್ (ಡಾಲ್ಫಿನ್)–1, ಮಾನವಿ ವರ್ಮಾ (ಡಾಲ್ಫಿನ್)–2, ನೈಶಾ ಶೆಟ್ಟಿ (ಸ್ವಿಮ್‌ಲೈಫ್)–3, ಕಾಲ: 29.21 ಸೆ. 100 ಮೀ. ಬಟರ್‌ಫ್ಲೈ: ನೈಶಾ ಶೆಟ್ಟಿ –1, ಲಕ್ಷ್ಯಾ ಶಿವಾನಂದ (ಬಿಎಸಿ)–2, ಶಿರಿನ್ (ಬಿಎಸಿ)–3, ಕಾಲ: 1ನಿ.06.37 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಶ್ರುತಿ ಕೆ.ಆರ್. (ಗ್ಲೋಬಲ್)–1 ರುತುಜಾ ರಾಜದನ್ಯ (ಡೆಕ್ಕನ್ ಅಕ್ವೆಟಿಕ್ಸ್)–2, ಶೃಂಗಿ ರಾಜೇಶ್ ಬಾಂದೇಕರ್ (ಜೈನ್ ಕಾಲೇಜು)–3, ಕಾಲ: 1ನಿ.08.74 ಸೆ.; 100 ಮೀ. ಮೆಡ್ಲೆ: ನೀನಾ ವೆಂಕಟೇಶ್ (ಡಾಲ್ಫಿನ್)–1, ಶೃಂಗಿ ರಾಜೇಶ್ ಬಾಂದೇಕರ್ (ಜೈನ್ ಕಾಲೇಜು)–2, ಲಕ್ಷ್ಯ ಶಿವಾನಂದ(ಬಿಎಸಿ)–3, ಕಾಲ:1ನಿ.,08.56ಸೆ.;
ಒಂದನೇ ಗುಂಪು:ಬಾಲಕರು: 100 ಮೀ. ವೈಯಕ್ತಿಕ ಮೆಡ್ಲೆ: ಆರ್.ನವನೀತ್ ಗೌಡ (ಡಾಲ್ಫಿನ್ ಅಕ್ವೆಟಿಕ್ಸ್)–1, ಸೂರ್ಯ ಜೆ.ಟಿ. (ಬಿಎಸಿ)–2, ಅಕ್ಷಜ್ ಥಾಕೂರಿಯಾ (ಡಾಲ್ಫಿನ್)–3, 59.93 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಸಮರ್ಥ್ ಗೌಡ ಬಿ.ಎಸ್.(ಬಿಎಸಿ)–1, ಅಮಾನ್ ಅಭಿಜಿತ್ ಎಸ್. (ಡಾಲ್ಫಿನ್)–2, ಕುಶಾಲ್ ಕೆ.(ಮತ್ಸ್ಯ ಐಎನ್‌ಸಿ)–3, ಕಾಲ: 1ನಿ.,01.13ಸೆ.; ಬಾಲಕಿಯರು: 100 ಮೀ. ಐಎಂ: ಧಿನಿಧಿ ದೇಸಿಂಗು (ಡಾಲ್ಫಿನ್)–1, ವಿಹಿತಾ ನಯನಾ (ಬಿಎಸಿ)–2, ಮಾನವಿ ವರ್ಮಾ–3, ಕಾಲ: 1ನಿ.04.92ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ನೈಶಾ (ಬಿಎಸಿ)–1, ಪ್ರಿಯಾಂಶಿ ಮಿಶ್ರಾ (ಬಿಎಸಿ)–2, ವಿಹಿತಾ ನಯನ (ಬಿಎಸಿ)–3, ಕಾಲ: 1ನಿ.,07.85ಸೆ.;
ಎರಡನೇ ಗುಂಪು: ಬಾಲಕರು: 100 ಮೀ. ಬ್ಯಾಕ್‌ಸ್ಟ್ರೋಕ್: ತ್ರಿಶಾ ಎಸ್. ಸಿಂಧು (ಲಕ್ಷ್ಯ ಅಕಾಡೆಮಿ ಆಫ್ ಸ್ಪೋರ್ಟ್ಸ್)–1, ಸುಮೇಧಾ ವಿ.(ಡಿಕೆವಿ)–2, ಅವನಿ ಬೆಳ್ಳಪ್ಪ (ಡಿಕೆವಿ)–3, ಕಾಲ: 1ನಿ.12.64ಸೆ.;
ಬಾಲಕಿಯರು: 100 ಮೀ. ಬ್ಯಾಕ್‌ಸ್ಟ್ರೋಕ್: ಅದ್ವೈತ ವೆಂಕಟ ಮಧಿರ (ಬಿಎಸಿ)–1, ವಿಹಾನ್ ಶಾಶ್ವತ್ ಚತುರ್ವೇಧಿ (ಬಿಎಸಿ)–2, ಗರಪತಿ ಭಾರದ್ವಾಜ್(ಗೋಲ್ಡನ್ ಫಿನ್ಸ್)–3, ಕಾಲ: 1ನಿ.02.64ಸೆ.;
ಮೂರನೇ ಗುಂಪು: ಬಾಲಕರು: 100 ಮೀ. ಬಟರ್‌ಫ್ಲೈ: ಲೋಹಿತಾಶ್ವ ಎಸ್.ನಾಗೇಶ್ (ಲಕ್ಷ್ಯನ್)–1, ರಕ್ಷಿತ್ ಎ.ಕೋರೆ (ಬಿಎಸಿ)–2, ಸುಜಿತ್ ಕಾರ್ತಿಕ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3, ಕಾಲ: 1ನಿ.11.17 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ರಕ್ಷಿತ್ ಎ. ಕೋರೆ (ಬಿಎಸಿ)–1, ಲೋಹಿತಾಶ್ವ ಎಸ್. ನಾಗೇಶ್ (ಲಕ್ಷ್ಯ ಅಕಾಡೆಮಿ ಆಫ್ ಸ್ಪೋರ್ಟ್ಸ್)–2, ಮಯಂಕ್ ಲಲಿತ್ (ಬಿಎಸಿ)–3, ಕಾಲ: 1ನಿ.12.82ಸೆ.;
ಬಾಲಕಿಯರು: 100 ಮೀ. ಬಟರ್‌ಫ್ಲೈ: ಇಮಯಾ ಎ.ಎಚ್. (ಡಿಕೆವಿ)–1, ಸ್ತುತಿ ಸಿಂಗ್ (ಬೆಂಗಳೂರು ಸ್ವಿಮಿಂಗ್ ಅಕಾಡೆಮಿ)–2, ಸ್ಮೃತಿ ಮಹೇಶ್ (ಬಿಎಸಿ)–3, ಕಾಲ: 1ನಿ.14.24 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಶ್ರೇಯಾ ಸುರೇಶ್ ಪೂಜಾರ್ (ಬಿಎಸ್‌ಎ)–1, ಝರ್ನಾ ಸಿಸೋಡಿಯಾ (ಏಕಲವ್ಯ ಸ್ಪೋರ್ಟ್ಸ್ ಅಕಾಡೆಮಿ)–2, ಸ್ತುತಿ ಸಿಂಗ್ (ಬಿಎಸ್‌ಎ)–3, ಕಾಲ: 1ನಿ.18.06ಸೆ.;
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.