ADVERTISEMENT

ನ್ಯೂಜಿಲೆಂಡ್ ರಗ್ಬಿ ಸಂಸ್ಥೆ ಉದ್ಯೋಗಿಗಳ ವೇತನಕ್ಕೆ ಕತ್ತರಿ

ಏಜೆನ್ಸೀಸ್
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST

ವೆಲಿಂಗ್ಟನ್: ಕೊರೊನಾ ವೈರಸ್ ಕಾಟದಿಂದ ಬಳಲಿರುವ ನ್ಯೂಜಿಲೆಂಡ್‌ನಲ್ಲಿ ರಗ್ಬಿ ಸಂಸ್ಥೆಯ ಉದ್ಯೋಗಿಗಳ ವೇತನಕ್ಕೆ ಕತ್ತರಿ ಬೀಳಲಿದೆ. ಇಂಗ್ಲೆಂಡ್‌, ಸ್ಕಾಟ್ಲೆಂಡ್ ಮತ್ತು ವೇಲ್ಸ್‌ ರಗ್ಬಿ ಸಂಸ್ಥೆಗಳು ಈಗಾಗಲೇ ವೇತನ ಕಡಿತಕ್ಕೆ ಮುಂದಾಗಿವೆ. ’ರಗ್ಬಿ ಆಸ್ಟ್ರೇಲಿಯಾ’ವು ಉದ್ಯೋಗಿಗಳ ಸಂಖ್ಯೆಯನ್ನೇ ಕಡಿಮೆ ಮಾಡುವ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್‌ನ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

‘ಮೂರು ಬಾರಿಯ ವಿಶ್ವ ಚಾಂಪಿಯನ್ ಮತ್ತು ಅಗ್ರ ಕ್ರಮಾಂಕದ ಟೆಸ್ಟ್ ತಂಡವಾಗಿರುವ ನ್ಯೂಜಿಲೆಂಡ್ ರಾಷ್ಟ್ರೀಯ ತಂಡ ಮತ್ತು ಐದು ಸೂಪರ್ ರಗ್ಬಿ ತಂಡಗಳು ಈ ವರ್ಷ ಮತ್ತೆ ಕಣಕ್ಕೆ ಇಳಿಯಲು ಶಕ್ತವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟ ಕಾಡುತ್ತಿದೆ. ಮೂರು ತಿಂಗಳು ಶೇಕಡಾ 40ರಷ್ಟು ವೇತನ ಬಿಟ್ಟುಕೊಟ್ಟು ಕೆಲಸ ಮಾಡಲು ಉದ್ಯೋಗಿಗಳು ಒಪ್ಪಿಕೊಂಡಿದ್ದಾರೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ರಾಬಿನ್ಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT