ADVERTISEMENT

ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿ ಬಿದ್ದ ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 20:13 IST
Last Updated 26 ನವೆಂಬರ್ 2018, 20:13 IST
ನಿರ್ಮಲಾ ಶೆರಾನ್‌
ನಿರ್ಮಲಾ ಶೆರಾನ್‌   

ನವದೆಹಲಿ: ಭಾರತದ ಓಟಗಾರ್ತಿ ನಿರ್ಮಲಾ ಶೆರಾನ್‌, ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರ ಜೊತೆಗೆ ಇತರೆ ನಾಲ್ಕು ಮಂದಿ ಅಥ್ಲೀಟ್‌ಗಳು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿದ್ದು, ಅವರ ಹೆಸರು ಬಹಿರಂಗವಾಗಿಲ್ಲ.

ಹೋದ ವರ್ಷ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ನಿರ್ಮಲಾ ಚಿನ್ನದ ಪದಕ ಜಯಿಸಿದ್ದರು. 4X400 ಮೀಟರ್ಸ್‌ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ತಂಡದಲ್ಲೂ ಇದ್ದರು.

ಹೋದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಬಳಿಕ 23 ವರ್ಷ ವಯಸ್ಸಿನ ನಿರ್ಮಲಾ ರಾಷ್ಟ್ರೀಯ ಶಿಬಿರಗಳಿಂದ ದೂರ ಉಳಿದಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದಲೂ ಹಿಂದೆ ಸರಿದಿದ್ದರು.

ADVERTISEMENT

ಜೂನ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಅವರು 51.25 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿಯ ಪದಕ ಜಯಿಸಿದ್ದರು. ಇದರೊಂದಿಗೆ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು. ಏಷ್ಯನ್‌ ಕೂಟದಲ್ಲಿ ನಾಲ್ಕನೇಯವರಾಗಿ ಗುರಿ ಮುಟ್ಟಿದ್ದ ಅವರು ಭಾರತ ಅಥ್ಲೆಟಿಕ್‌ ಫೆಡರೇಷನ್‌ನ (ಎಎಫ್‌ಐ) ನಿರ್ದೇಶನವಿದ್ದರೂ ರಾಷ್ಟ್ರೀಯ ಶಿಬಿರಕ್ಕೆ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.