ADVERTISEMENT

ಒಲಿಂಪಿಕ್‌ ಜ್ಯೋತಿ ಒಂದು ತಿಂಗಳು ಫುಕುಶಿಮಾದಲ್ಲಿ

ಏಜೆನ್ಸೀಸ್
Published 1 ಏಪ್ರಿಲ್ 2020, 21:29 IST
Last Updated 1 ಏಪ್ರಿಲ್ 2020, 21:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಟೋಕಿಯೊ ಒಲಿಂಪಿಕ್‌ ಜ್ಯೋತಿಯನ್ನು ಏಪ್ರಿಲ್‌ ಅಂತ್ಯದವರೆಗೆ ಜಪಾನ್‌ನ ಫುಕುಶಿಮಾದಲ್ಲೇ ಪ್ರದರ್ಶನಕ್ಕೆ ಇಡಲಾಗುತ್ತದೆ. ಒಲಿಂಪಿಕ್ಸ್‌ ಹಾಗೂ ಫುಕುಶಿಮಾ ಪ್ರಾಂತ್ಯದ ಅಧಿಕಾರಿಗಳು ಫುಕುಶಿಮಾದ ಜೆ ವಿಲೇಜ್‌ ನ್ಯಾಶನಲ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ಬುಧವಾರ ‘ಜ್ಯೋತಿ ಹಸ್ತಾಂತರ’ ಪ್ರಕ್ರಿಯೆ ನಡೆಸಿದರು.

ಜ್ಯೋತಿ ವೀಕ್ಷಣೆಗೆ ಬರುವವರ ಸಂಖ್ಯೆಯನ್ನುಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಸೀಮಿತಗೊಳಿಸಲಾಗಿದೆ.

ಜ್ಯೋತಿಯನ್ನು ಗ್ರೀಸ್‌ನಿಂದ ಜಪಾನ್‌ಗೆ ಮಾರ್ಚ್‌ 20ರಂದು ತರಲಾಗಿತ್ತು. ಹೋದವಾರದಿಂದ ಫುಕುಶಿಮಾದಲ್ಲಿ ಜ್ಯೋತಿಯಾತ್ರೆ ಆರಂಭವಾಗಬೇಕಿತ್ತು. ಬುಧವಾರದ ವಿಧ್ಯುಕ್ತ ಕಾರ್ಯಕ್ರಮದೊಂದಿಗೆ ಜ್ಯೋತಿಯು ಫುಕುಶಿಮಾದಲ್ಲೇ ಉಳಿಯಿತು.

ADVERTISEMENT

ಏಪ್ರಿಲ್‌ ಬಳಿಕ ಒಲಿಂಪಿಕ್‌ ಜ್ಯೋತಿಯನ್ನು ಎಲ್ಲಿಗೆ ಕೊಂಡೊಯ್ಯಬೇಕೆಂಬುದನ್ನು ಅಧಿಕಾರಿಗಳು ಹೇಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.