ADVERTISEMENT

ಒಲಿಂಪಿಕ್‌ ಅರ್ಹತಾ ಟೂರ್ನಿ ಮುಂದಕ್ಕೆ

ಪಿಟಿಐ
Published 28 ಫೆಬ್ರುವರಿ 2020, 19:48 IST
Last Updated 28 ಫೆಬ್ರುವರಿ 2020, 19:48 IST

ನವದೆಹಲಿ : ಕಿರ್ಗಿಸ್ತಾನದ ಬಿಷೆಕ್‌ನಲ್ಲಿ ಮಾರ್ಚ್‌ 27 ರಿಂದ 29ರವರೆಗೆ ನಡೆಯಬೇಕಾಗಿದ್ದ ಏಷ್ಯನ್‌ ಒಲಿಂಪಿಕ್‌ ಕುಸ್ತಿ ಅರ್ಹತಾ ಸುತ್ತಿನ ಟೂರ್ನಿಯನ್ನು ಶುಕ್ರವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಕೋವಿಡ್‌ ಸೋಂಕಿನ ಆತಂಕದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವೈರಸ್‌ ಆತಂಕದಿಂದಾಗಿ, ಮುಂದಿನ ಸೂಚನೆಯವರೆಗೆ ಯಾವುದೇ ಕ್ರೀಡಾಕೂಟಗಳನ್ನು ನಡೆಸದಂತೆ ಕಿರ್ಗಿಸ್ತಾನ ಸರ್ಕಾರ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT