ADVERTISEMENT

₹ 1029 ಕೋಟಿ ವೆಚ್ಚದ ನೂತನ ಐಒಸಿ ಭವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST
ನೂತನ ಐಒಸಿ ಕಚೇರಿ ವೀಕ್ಷಿಸುತ್ತಿರುವ ಅತಿಥಿಗಳು–ರಾಯಿಟರ್ಸ್ ಚಿತ್ರ
ನೂತನ ಐಒಸಿ ಕಚೇರಿ ವೀಕ್ಷಿಸುತ್ತಿರುವ ಅತಿಥಿಗಳು–ರಾಯಿಟರ್ಸ್ ಚಿತ್ರ   

ಲಾಸನ್‌, ಸ್ವಿಟ್ಜರ್ಲೆಂಡ್‌ (ಎಪಿ): ಒಲಿಂಪಿಕ್‌ ಗೇಮ್ಸ್ ಪುನರಾರಂಭಗೊಂಡ ಬರೋಬ್ಬರಿ 125 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ತನ್ನ ನೂತನ ಪ್ರಧಾನ ಕಚೇರಿಯನ್ನು ರವಿವಾರ ಇಲ್ಲಿ ಉದ್ಘಾಟಿಸಿತು. ಇದಕ್ಕೆ ಸುಮಾರು ₹ 1029.5 ಕೋಟಿ (145 ಮಿಲಿಯನ್‌ ಸ್ವಿಸ್‌ ಫ್ರಾಂಕ್‌) ವೆಚ್ಚ ತಗುಲಿದೆ.

‘ಪಿಯರೆ ಡಿ ಕೂಬರ್ತಿ (ಐಒಸಿ ಸಂಸ್ಥಾಪಕ) ಅವರು ಎಂಥ ದೂರದೃಷ್ಟಿಯುಳ್ಳವರಾಗಿದ್ದರು ಎಂಬುದು ಸಂಸ್ಥೆಯ 125 ವರ್ಷಾಚರಣೆಯಲ್ಲಿ ಕಂಡುಬರುತ್ತಿದೆ. ಇಡೀ ವಿಶ್ವವನ್ನು ಒಂದು ಶಾಂತಿಯುತ ಸ್ಪರ್ಧೆಗಾಗಿ ಒಂದುಗೂಡಿಸುವ ಮೂಲಕ ಒಲಿಂಪಿಕ್ ಕ್ರೀಡೆಗಳು ಶಾಂತಿ ಮತ್ತು ಮಾನವತೆಯ ಸಂದೇಶ ಸಾರಿದೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಐಒಸಿ ಅಧ್ಯಕ್ಷ ಥಾಮಸ್‌ ಬಾಶ್‌ ಹೇಳಿದರು.

ನೂತನ ಕಚೇರಿಯು ಹಳೆಯ ಕಚೇರಿ ಇದ್ದ ಸ್ಥಳದಲ್ಲೇ ನಿರ್ಮಾಣಗೊಂಡಿದೆ. ಕಚೇರಿಯ ಶೇಕಡಾ 95ರಷ್ಟು ಹಳೆಯ ವಸ್ತುಗಳನ್ನು ಮರುಬಳಕೆ ಮಾಡಲಾಗಿದೆ. ಡೆನ್ಮಾರ್ಕ್‌ನ 3ಎಕ್ಸ್ಎನ್‌ ಎಂಬ ವಾಸ್ತುಶಿಲ್ಪ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವಇಂಧನ ದಕ್ಷತೆ ಹೊಂದಿರುವ ಈ ಕಟ್ಟಡ, ಸುಸ್ಥಿರತೆಗಾಗಿ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಛಾವಣಿಯ ಮೇಲೆ ಸೌರಫಲಕಗಳನ್ನು ಉಪಯೋಗಿಸಿ ನವೀಕರಿಸಬಹುದಾದ ಶಕ್ತಿಯನ್ನು ಒದಗಿಸಲಾಗಿದೆಹಾಗೂ ಜಿನೇವಾ ಸರೋವರದಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.