ADVERTISEMENT

ಐಒಸಿ: 2025ರವರೆಗೆ ಥಾಮಸ್‌ ಬ್ಯಾಚ್‌ ಅಧಿಕಾರ

ರಾಯಿಟರ್ಸ್
Published 1 ಡಿಸೆಂಬರ್ 2020, 14:56 IST
Last Updated 1 ಡಿಸೆಂಬರ್ 2020, 14:56 IST
ಥಾಮಸ್‌ ಬ್ಯಾಚ್‌–ರಾಯಿಟರ್ಸ್ ಚಿತ್ರ
ಥಾಮಸ್‌ ಬ್ಯಾಚ್‌–ರಾಯಿಟರ್ಸ್ ಚಿತ್ರ   

ಬರ್ಲಿನ್‌: ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್‌ ಬ್ಯಾಚ್‌ ಅವರು 2025ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಅವರೊಬ್ಬರೇ ಅಭ್ಯರ್ಥಿಯಾಗಿರುವುದರಿಂದ ಆಯ್ಕೆ ಖಚಿತವಾಗಿದೆ ಎಂದು ಐಒಸಿ ಹೇಳಿದೆ.

ಬ್ಯಾಚ್ ಅವರು 2013ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ನಡೆದ ಚುನಾವಣೆಯಲ್ಲಿ ಐವರು ಅಭ್ಯರ್ಥಿಗಳನ್ನು ಹಿಂದಿಕ್ಕಿ ಅಧ್ಯಕ್ಷ ಹುದ್ದೆಗೇರಿದ್ದರು. ಅವರಿಗಿಂತ ಮೊದಲು ಜಾಕಸ್‌ ರೋಗ್‌ ಅಧಿಕಾರದಲ್ಲಿದ್ದರು.

ಒಲಿಂಪಿಕ್‌ ಮಂಡಳಿಯ ನಿಯಮಗಳನ್ವಯ ಒಬ್ಬ ವ್ಯಕ್ತಿ ಐಒಸಿ ಅಧ್ಯಕ್ಷ ಹುದ್ದೆಯಲ್ಲಿ ಎರಡು ಅವಧಿಯವರೆಗೆ ಮಾತ್ರ ಇರಬಹುದು. ಮೊದಲ ಅವಧಿಗೆ ಆಯ್ಕೆಯಾದವರು 8 ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ಮರು ಆಯ್ಕೆಯಾದರೆ ನಾಲ್ಕು ವರ್ಷ ಹುದ್ದೆಯಲ್ಲಿರುತ್ತಾರೆ.

ADVERTISEMENT

‘ಅಥೆನ್ಸ್‌ನಲ್ಲಿ ಮಾರ್ಚ್‌ 2021ಕ್ಕೆ ನಿಗದಿಯಾಗಿರುವ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಬ್ಯಾಚ್‌ ಒಬ್ಬರೇ ಅಭ್ಯರ್ಥಿಯಾಗಿದ್ದಾಗಿ ತನ್ನ ಸದಸ್ಯರು ಮಾಹಿತಿ ನೀಡಿದ್ದಾರೆ‘ ಎಂದು ಐಒಸಿ ಹೇಳಿದೆ.

ಜರ್ಮನಿಯ ವಕೀಲರಾಗಿರುವ ಬ್ಯಾಚ್‌ ಅವರು 1976ರ ಮಾಂಟ್ರಿಯಲ್‌ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.