ADVERTISEMENT

‍ಪಾಕ್‌ ಶೂಟರ್‌ಗಳಿಗೆ ವೀಸಾ ನೀಡಲು ಅನುಮತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:15 IST
Last Updated 18 ಫೆಬ್ರುವರಿ 2019, 20:15 IST

ನವದೆಹಲಿ: ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾಗವಹಿಸಲಿರುವ ಪಾಕಿಸ್ತಾನ ತಂಡಕ್ಕೆ ವೀಸಾ ನೀಡಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ಈ ವಿಷಯವನ್ನು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಸೋಮವಾರ ಖಚಿತಪಡಿಸಿದೆ.

‘ಸೋಮವಾರ ಮಧ್ಯಾಹ್ನ ಇಂಡಿಯನ್‌ ಹೈ ಕಮಿಷನ್‌ನಿಂದ ದೂರವಾಣಿ ಕರೆ ಬಂತು. ಈ ವೇಳೆ ಅಧಿಕಾರಿಯೊಬ್ಬರು ಪಾಕಿಸ್ತಾನ ತಂಡಕ್ಕೆ ವೀಸಾ ನೀಡುತ್ತಿರುವ ವಿಷಯವನ್ನು ಖಾತರಿಪಡಿಸಿದರು. ಇದರ ಬೆನ್ನಲ್ಲೇ ವಿಶ್ವಕಪ್‌ಗೆ ತಂಡವನ್ನು ಕಳುಹಿಸುತ್ತಿರುವ ವಿಚಾರವನ್ನು ಪಾಕಿಸ್ತಾನ ರಾಷ್ಟ್ರೀಯ ರೈಫಲ್‌ ಸಂಸ್ಥೆಯು ಇ ಮೇಲ್‌ ಮೂಲಕ ದೃಢಪಡಿಸಿದೆ’ ಎಂದು ಎನ್‌ಆರ್‌ಎಐ ಮಹಾ ಕಾರ್ಯದರ್ಶಿ ರಾಜೀವ್‌ ಭಾಟಿಯಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಶೂಟರ್‌ಗಳಾದ ಗುಲಾಮ್‌ ಮುಸ್ತಾಫ ಬಷೀರ್‌ ಮತ್ತು ಮಹಮ್ಮದ್‌ ಖಲೀಲ್‌ ಅಖ್ತರ್‌ ಅವರ ಜೊತೆ ಕೋಚ್‌ ಒಬ್ಬರು ಬುಧವಾರ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಪಾಕ್‌ ಶೂಟರ್‌ಗಳು ಶನಿವಾರ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಪಾಕಿಸ್ತಾನದ ಮೂವರು ಸದಸ್ಯರ ತಂಡಕ್ಕೆ ಸಂಪೂರ್ಣ ಭದ್ರತೆ ಒದಗಿಸಲಾಗುತ್ತದೆ. ಈ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಭಾಟಿಯಾ ಹೇಳಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ 23 ಸದಸ್ಯರ ತಂಡ ಭಾಗವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.