
ಪ್ರಜಾವಾಣಿ ವಾರ್ತೆ
ಪ್ರೊ ಕಬಡ್ಡಿ ಲೀಗ್
ಚೆನ್ನೈ: ಆದಿತ್ಯ ಶಿಂದೆ ಮತ್ತು ನಾಯಕ ಪಂಕಜ್ ಮೋಹಿತೆ ಅವರ ಚುರುಕಿನ ದಾಳಿಯ ಬಲದಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜಯಿಸಿತು.
ಉತ್ತಮ ದಾಳಿ ನಡೆಸಿ 13 ಅಂಕ ಗಳಿಸಿದ ಆದಿತ್ಯ ಹಾಗೂ ಪಂಕಜ್ (8 ಅಂಕ) ಅವರ ಆಟದ ಬಲದಿಂದ ಪುಣೇರಿ ತಂಡವು 41–36ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದಿತು.
ಜೈಪುರ ತಂಡದ ರೇಡರ್ ಅಲಿ ಚೌಬಾತೊರಷ್ ಅವರು 22 ಅಂಕಗಳನ್ನು ಕಲೆಹಾಕಿದರು. ಆದರೂ ತಂಡವು ಗೆಲುವಿನ ದಡ ಸೇರುವಲ್ಲಿ ವಿಫಲವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.