ADVERTISEMENT

ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌: ಪಂಕಜ್‌ ಅಡ್ವಾಣಿಗೆ 26ನೇ ಕಿರೀಟ

ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 13:38 IST
Last Updated 21 ನವೆಂಬರ್ 2023, 13:38 IST
ಟ್ರೋಫಿಯೊಂದಿಗೆ ಪಂಕಜ್‌ ಅಡ್ವಾಣಿ (ಬಲ) ಹಾಗೂ ಸೌರವ್‌ ಕೊಠಾರಿ
ಟ್ರೋಫಿಯೊಂದಿಗೆ ಪಂಕಜ್‌ ಅಡ್ವಾಣಿ (ಬಲ) ಹಾಗೂ ಸೌರವ್‌ ಕೊಠಾರಿ   

ದೋಹಾ: ಭಾರತದ ಪಂಕಜ್‌ ಅಡ್ವಾಣಿ ಅವರು ದೋಹಾದಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡರು. ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ನಲ್ಲಿ ಅವರು ಗೆದ್ದ 26ನೇ ವಿಶ್ವ ಕಿರೀಟ ಇದು.

ಮಂಗಳವಾರ ನಡೆದ ಫೈನಲ್‌ನಲ್ಲಿ ಪಂಕಜ್‌ 1000– 416 ರಿಂದ ಭಾರತದವರೇ ಆದ ಸೌರವ್‌ ಕೊಠಾರಿ ಅವರನ್ನು ಮಣಿಸಿದರು. ಕಳೆದ ವರ್ಷ ಕ್ವಾಲಾಂಪುರದಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲೂ ಇವರಿಬ್ಬರು ಪೈಪೋಟಿ ನಡೆಸಿದ್ದರು.

ಪಂಕಜ್‌ ಅವರು 2005 ರಲ್ಲಿ ತಮ್ಮ ಮೊದಲ ವಿಶ್ವ ಚಾಂಪಿಯನ್‌ಪಿಪ್‌ ಗೆದ್ದುಕೊಂಡಿದ್ದರು. ಬಿಲಿಯರ್ಡ್ಸ್‌ ಸ್ಪರ್ಧೆಯ ‘ಪಾಯಿಂಟ್‌ ಫಾರ್ಮ್ಯಾಟ್‌’ನಲ್ಲಿ ಎಂಟು ಹಾಗೂ ‘ಲಾಂಗ್‌ ಫಾರ್ಮ್ಯಾಟ್‌’ನಲ್ಲಿ ಒಂಬತ್ತು ಪ್ರಶಸ್ತಿ ಜಯಿಸಿದ್ದಾರೆ. ವಿಶ್ವ ತಂಡ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ಅನ್ನು ಒಮ್ಮೆ ಗೆದ್ದುಕೊಂಡಿದ್ದಾರೆ. ಸ್ನೂಕರ್‌ನಲ್ಲಿ ಅವರು ಎಂಟು ಸಲ ವಿಶ್ವ ಚಾಂಪಿಯನ್‌ ಆಗಿದ್ದಾರೆ.

ADVERTISEMENT

ಸೋಮವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಪಂಕಜ್‌ 900–273 ರಿಂದ ರೂಪೇಶ್‌ ಶಾ ಅವರನ್ನು ಮಣಿಸಿದ್ದರೆ, ಕೊಠಾರಿ 900–756 ರಿಂದ ಧ್ರುವ್‌ ಸಿತ್ವಾಲ ಎದುರು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.