
ಪ್ರಜಾವಾಣಿ ವಾರ್ತೆ
ನವದೆಹಲಿ: ಎರಡೂ ತೋಳುಗಳಿಲ್ಲದ ಬಿಲ್ಗಾರ್ತಿ ಶೀತಲ್ ದೇವಿ ಅವರು ಜೆಡ್ಡಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಮೂರನೇ ಹಂತದ ಆರ್ಚರಿ ಸ್ಪರ್ಧೆಗೆ ಭಾರತ ಸಮರ್ಥರ (ಎಬಲ್ಡ್ ಬಾಡಿಡ್) ಜೂನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಂತರರಾಷ್ಟ್ರೀಯ ಸ್ಪರ್ಧೆಗಾಗಿ ಸಮರ್ಥರ ತಂಡದಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಸ್ಥಾನ ಪಡೆದಿರುವುದು ಇದೇ ಮೊದಲು. ಈ ಮೂಲಕ ಪ್ಯಾರಾ ವಿಶ್ವ ಕಾಂಪೌಂಡ್ ಚಾಂಪಿಯನ್ ಶೀತಲ್ ಹೊಸ ದಾಖಲೆ ಬರೆದಿದ್ದಾರೆ.
ಸೋನಿಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 60ಕ್ಕೂ ಹೆಚ್ಚು ಆರ್ಚರಿಪಟುಗಳು ಭಾಗವಹಿಸಿದ್ದರು. ಈ ಪೈಕಿ ಜಮ್ಮು ಮತ್ತು ಕಾಶ್ಮೀರದ 18 ವರ್ಷದ ಶೀತಲ್ ಒಟ್ಟಾರೆಯಾಗಿ ಮೂರನೇ ಸ್ಥಾನ ಪಡೆದರು.
‘ಸಮರ್ಥರ ಜೊತೆ ಸ್ಪರ್ಧಿಸಬೇಕೆಂಬ ನನ್ನ ಬಹುದಿನದ ಕನಸು ಈಗ ನನಸಾಗುತ್ತಿದೆ’ ಎಂದು ತಂಡ ಪ್ರಕಟಿಸಿದ ಬಳಿಕ ಶೀತಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.