ADVERTISEMENT

ವಿಶ್ವ ಪ್ಯಾರಾ ಶೂಟಿಂಗ್: ಸಿಂಗರಾಜ್‌ಗೆ ಚಿನ್ನ

ಪಿಟಿಐ
Published 21 ಮಾರ್ಚ್ 2021, 12:52 IST
Last Updated 21 ಮಾರ್ಚ್ 2021, 12:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಲ್‌ ಐನ್‌, ಯುಎಇ: ಅಮೋಘ ಕೌಶಲ ತೋರಿದ ಭಾರತದ ಸಿಂಗರಾಜ್‌ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಸ್ಪೋರ್ಟ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪಿ1 ಪುರುಷರ 10 ಮೀಟರ್ ಏರ್‌ ಪಿಸ್ತೂಲ್‌ ಎಸ್‌ಎಚ್‌1 ಫೈನಲ್ಸ್‌ನಲ್ಲಿ ಅವರು ಅಗ್ರಸ್ಥಾನ ಗಳಿಸಿದರು. ಫೈನಲ್‌ನಲ್ಲಿ ಅವರು (236.8) 2.8 ಪಾಯಿಂಟ್ಸ್ ಅಂತರದಿಂದ ಉಜ್ಬೆಕಿಸ್ತಾನದ ಸರ್ವರ್ ಇಬ್ರಾಗಿಮೊವ್‌ (234) ಸವಾಲು ಮೀರಿದರು.

ಮಾಜಿಪ್ಯಾರಾಲಿಂಪಿಕ್ ಚಾಂಪಿಯನ್, ಟರ್ಕಿಯ ಮುಹರ್ರೆಮ್‌ ಕೊರಾನ್ ಯಮಾಕ್ (214.4) ಅವರಿಗೆ ಕಂಚಿನ ಪದಕ ಒಲಿಯಿತು.

ADVERTISEMENT

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮನೀಷ್ ನರ್ವಾಲ್‌ 194.3 ಪಾಯಿಂಟ್ಸ್ ಕಲೆಹಾಕಿ ನಾಲ್ಕನೇ ಸ್ಥಾನ ಗಳಿಸಿದರು.ರಾಹುಲ್ ಜಾಕಡ್ ಎಂಟನೇ ಸ್ಥಾನ ಗಳಿಸಿದರು.

ರಾಹುಲ್‌ ಅವರು ಪಿ3 25 ಮೀ. ಮಿಶ್ರ ಏರ್ ಪಿಸ್ತೂಲ್ ಎಸ್‌ಎಚ್‌1 ವಿಭಾಗದಲ್ಲಿ ಈಗಾಗಲೇ ಕಂಚು ಗೆದ್ದುಕೊಂಡಿದ್ದಾರೆ.

ಸಿಂಗರಾಜ್ ಅವರು ಚಿನ್ನದ ಪದಕ ಗೆಲ್ಲುವುದರೊಂದಿಗೆ ಭಾರತವು (ತಲಾ ಒಂದು ಚಿನ್ನ, ಕಂಚು) ಟೂರ್ನಿಯ ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಉಕ್ರೇನ್ (ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು) ಹಾಗೂ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಎರಡು ಚಿನ್ನ) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.