ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ (ಬಲ)
ಚಿತ್ರ: X / @WSportsZone
ಪ್ಯಾರಿಸ್: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ ಜೋಡಿ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ.
ಈ ಜೋಡಿ, ದಕ್ಷಿಣ ಕೊರಿಯಾದ ಕಿಮ್ ಸೊ ಯಿಯಾಂಗ್ ಮತ್ತು ಕಾಗ್ ಹೀ ಯಾಂಗ್ ಎದುರು 18-21, 10-21 ಅಂತರದಿಂದ ಮುಗ್ಗರಿಸಿದೆ.
ಶನಿವಾರ 44 ನಿಮಿಷ ನಡೆದ ಹಣಾಹಣಿಯ ಮೊದಲ ಸುತ್ತಿನಲ್ಲಿ ಉತ್ತಮ ಪೈಪೋಟಿ ನೀಡಿದ ಅಶ್ವಿನಿ ಮತ್ತು ತನಿಷಾ, ಎರಡನೇ ಸುತ್ತಿನಲ್ಲಿ ನೀರಸ ಪ್ರದರ್ಶನ ನೀಡಿತು. ಹೀಗಾಗಿ, ಸೆಣಸಾಟ ಏಕಪಕ್ಷೀಯವಾಗಿ ಮುಕ್ತಾಯವಾಯಿತು.
ಭಾರತದ ಜೋಡಿ ಮುಂದಿನ ಪಂದ್ಯದಲ್ಲಿ ಜಪಾನ್‌ನ ಚಿಹರು ಶಿದಾ ಮತ್ತು ನಮಿ ಮತ್ಸುಯಾಮ ಎದುರು ಸೋಮವಾರ ಕಣಕ್ಕಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.