ADVERTISEMENT

ಒಲಿಂಪಿಕ್ಸ್‌: ಕ್ರೀಡಾಗ್ರಾಮ ತಲುಪಿದ ಭಾರತದ 48 ಕ್ರೀಡಾಪಟುಗಳು

ಪಿಟಿಐ
Published 22 ಜುಲೈ 2024, 18:09 IST
Last Updated 22 ಜುಲೈ 2024, 18:09 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ಪ್ಯಾರಿಸ್‌ (ಪಿಟಿಐ): ಜುಲೈ 26ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಆರ್ಚರಿ, ಟೇಬಲ್ ಟೆನಿಸ್ ಮತ್ತು ಹಾಕಿ ತಂಡದ ಸದಸ್ಯರು ಸೇರಿದಂತೆ ಒಟ್ಟು 49 ಭಾರತದ ಕ್ರೀಡಾಪಟುಗಳು ಈತನಕ ಕ್ರೀಡಾಗ್ರಾಮಕ್ಕೆ ಬಂದಿದ್ದಾರೆ.

ಟೇಬಲ್ ಟೆನಿಸ್ ತಂಡದ ಎಂಟು ಸದಸ್ಯರು ಮತ್ತು ಪುರುಷರ ಹಾಕಿ ತಂಡದ 19 ಸದಸ್ಯರು ಸೇರಿದಂತೆ 39 ಅಥ್ಲೀಟ್‌ಗಳು ಫ್ರಾನ್ಸ್ ರಾಜಧಾನಿಗೆ ಬಂದಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 21 ಮಂದಿಯಲ್ಲಿ 10 ಶೂಟರ್‌ಗಳೂ ತಲುಪಿದ್ದಾರೆ.

ಅಲ್ಲದೆ, ಬಂದಿರುವ ತಂಡದಲ್ಲಿ ಆರ್ಚರಿ ತಂಡದ ಆರು ಸದಸ್ಯರು, ಇಬ್ಬರು ಟೆನಿಸ್ ಆಟಗಾರರು, ಒಬ್ಬ ಬ್ಯಾಡ್ಮಿಂಟನ್‌ಪಟು, ಒಬ್ಬ ರೋವರ್ ಮತ್ತು ಇಬ್ಬರು ಈಜುಗಾರರು ಇದ್ದಾರೆ.

ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 70 ಪುರುಷರು ಮತ್ತು 47 ಮಹಿಳೆಯರು ಸೇರಿದಂತೆ ಒಟ್ಟು 117 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು 95 ಪದಕಗಳಿಗಾಗಿ 69 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ 140 ನೆರವು ಸಿಬ್ಬಂದಿ ಇರುವರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 119 ಮಂದಿಯ ತಂಡವು ಭಾರತವನ್ನು ಪ್ರತಿನಿಧಿಸಿತ್ತು. ಅಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನ ಗೆದ್ದಿದ್ದರು. ಅಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಸೇರಿದಂತೆ ಭಾರತವು 7 ಪದಕಗಳನ್ನು ಗೆದ್ದಿತ್ತು. ಅದು ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.